ಎನ್‍ಕೌಂಟರ್ ನಲ್ಲಿ 13 ನಕ್ಸಲರು ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Naxal
ಗಡ್‍ಚಿರೋಲಿ(ಮಹಾರಾಷ್ಟ್ರ),ಏ.22-ಮಹಾರಾಷ್ಟ್ರದ ಗಡ್‍ಚಿರೋಲಿ ಜಿಲ್ಲೆಯ ಬೋರಿಯಾ ಅರಣ್ಯ ಪ್ರದೇಶದಲ್ಲಿ ಇಂದು ಬೆಳಗ್ಗೆ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ 13 ನಕ್ಸಲರು ಹತರಾಗಿದ್ದಾರೆ. ಮಹಾರಾಷ್ಟ್ರ-ಛತ್ತೀಸ್‍ಗಢ-ತೆಲಂಗಾಣ ರಾಜ್ಯಗಳ ಗಡಿಭಾಗವಾದ ಗಡ್‍ಚಿರೋಲಿ ನಕ್ಸಲರ ಕಾರಸ್ಥಾನ. ಇಲ್ಲಿನ ಬೋರಿಯ ಅರಣ್ಯ ಪ್ರದೇಶದಲ್ಲಿ ನಕ್ಸಲರು ಇರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾಗ ಮಾವೋವಾದಿಗಳು ಮರೆಯಿಂದ ಗುಂಡಿನ ಮಳೆಗೆರೆದರು.
ಈ ಸಂದರ್ಭದಲ್ಲಿ ನಡೆದ ಗುಂಡಿನ ಕಾಳಗದಲ್ಲಿ 13 ನಕ್ಸಲರು ಹತರಾದರು. ಮೃತ ನಕ್ಸಲರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನು, ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

Facebook Comments

Sri Raghav

Admin