ಕಲುಷಿತ ನೀರು ಕುಡಿದು ಬಾಲಕಿ ಸಾವು, 40ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಈ ಸುದ್ದಿಯನ್ನು ಶೇರ್ ಮಾಡಿ

Gadag--01ಗದಗ, ಏ.22- ಕಲುಷಿತ ನೀರು ಸೇವನೆಯಿಂದ ಒಬ್ಬ ಬಾಲಕಿ ಸಾವನ್ನಪ್ಪಿ 40ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿರುವ ಘಟನೆ ಶಿರಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶಿರಹಟ್ಟಿ ತಾಲೂಕಿನ ತಂಗೋಡ ಗ್ರಾಮಕ್ಕೆ ತುಂಗಭದ್ರಾ ನದಿಯಿಂದ ನೀರು ಒದಗಿಸದೆ ಇರುವುದರಿಂದ ಅಲ್ಲಿನ ಜನರು ಕಲುಷಿತ ನೀರು ಸೇವಿಸುತ್ತಿದ್ದು, ಇದರಿಂದಲೇ ಅಸ್ವಸ್ಥಗೊಂಡಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

ನಿನ್ನೆ ರಾತ್ರಿ ಊಟ ಮಾಡಿ ನೀರು ಕುಡಿದು ಮಲಗಿದ್ದೆವು. ಏಕಾಏಕಿ ವಾಂತಿ-ಭೇದಿ ಕಾಣಿಸಿಕೊಂಡಿದ್ದು, ತಕ್ಷಣವೇ ಗ್ರಾಮಸ್ಥರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ಅಸ್ವಸ್ಥ ಚೆನ್ನಮ್ಮ ತಿಳಿಸಿದ್ದಾರೆ.  10 ವರ್ಷದ ಈರಣ್ಣ ಕಮ್ಮಾರ್, ಪೂರ್ಣಿಮಾ ಸೇರಿದಂತೆ 40 ಮಂದಿ ಅಸ್ವಸ್ಥರಾಗಿದ್ದು, ಅವರಲ್ಲಿ 9 ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ. ಸ್ಥಳಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಪಾಂಡುರಂಗ ಕಬಾಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Facebook Comments

Sri Raghav

Admin