ಕಾಂಗ್ರೆಸ್ 50 ಸೀಟೂ ಗೆಲ್ಲಲ್ಲ : ಜಾವ್ಡೇಕರ್ ಭವಿಷ್ಯ ವಾಣಿ

ಈ ಸುದ್ದಿಯನ್ನು ಶೇರ್ ಮಾಡಿ

Prakash-Javdekar--01

ಮಹದೇವಪುರ, ಏ.22- ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 50 ಸೀಟುಗಳನ್ನು ಸಹ ಗೆಲ್ಲದು ಎಂದು ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಭವಿಷ್ಯ ನುಡಿದರು.  ಮಹದೇವಪುರ ಕ್ಷೇತ್ರದ ಮಾರತ್ತಹಳ್ಳಿ ಬಳಿ ಹಮ್ಮಿಕೊಂಡಿದ್ದ ಘಟಕ ನಾಯಕರ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.  ಸಿದ್ದರಾಮಯ್ಯ ಅವರ ಸರ್ಕಾರ ಕೊಲೆಗಳು, ಸುಲಿಗೆ ಹಾಗೂ ನಗರ ಸೌಂದರ್ಯವನ್ನು ಕೆಡೆಸಿದ ಕುಖ್ಯಾತಿಗೆ ಪಾತ್ರವಾಗಿದೆ. ಒಂದು ಕಾಲದಲ್ಲಿ ಶಾಂತಿ ಸೌಹಾರ್ದತೆಗೆ ಹೆಸರು ಪಡೆದಿದ್ದ ಬೆಂಗಳೂರು ನಗರ ಹಲ್ಲೆ, ಕೊಲೆ, ಸುಲಿಗೆಗಳಿಂದಾಗಿ ಕ್ರೈಂ ಸಿಟಿಯಾಗಿ ಮಾರ್ಪಟ್ಟಿದೆ ಎಂದು ಹೇಳಿದರು. ಬೆಂಗಳೂರು ನಗರದಲ್ಲಿ ನೀರಿನಿಂದ ಕೂಡಿರಬೇಕಾದ ಕೆರೆಗಳು ಬೆಂಕಿ ಉಗುಳುವ ಸ್ಥಿತಿಗೆ ತಲುಪಿರುವುದು ಸಿದ್ದರಾಮಯ್ಯ ಸರ್ಕಾರದ ಸಾಧನೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ದೇಶದಾದ್ಯಂತ ಬಿಜೆಪಿಯ ಅಲೆ ಆರಂಭವಾಗಿದ್ದು, ಕರ್ನಾಟಕದಲ್ಲೂ ಸಹ ಅದು ಮುಂದುವರೆದು 23ನೆಯ ರಾಜ್ಯವಾಗಿ ಪರಿವರ್ತನೆಯಾಗಲಿದೆ ಎಂದು ಭವಿಷ್ಯ ನುಡಿದರು. ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದು, ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸುತ್ತಿರುವುದು ನೋಡಿದರೆ ಬಹುತೇಕ ಎಲ್ಲಾ ಅಭ್ಯರ್ಥಿಗಳ ಹಣ ದುಪ್ಟಟ್ಟಾಗಿರುವುದು ಅವರೇ ತಿಳಿಸಿದ್ದಾರೆ ಎಂದು ನೇರ ಆರೋಪ ಮಾಡಿದರು.

ಸರ್ಕಾರ ಬದಲಿಸಿ ಬಿಜೆಪಿ ಗೆಲ್ಲಿಸಿ ಎಂಬ ಘೋಷಣೆಯನ್ನು ಎಲ್ಲಾ ಕಾರ್ಯಕರ್ತರು ಕೂಗಿ ಬಿಜೆಪಿ ಸರ್ಕಾರ ರಚನೆಗೆ ಪಣ ತೊಡಬೇಕು ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಗಳನ್ನು ಜನರಿಗೆ ತಿಳಿಸುವ ಮೂಲಕ ಮೂರನೇ ಬಾರಿ ಲಿಂಬಾವಳಿ ಅವರನ್ನು ಗೆಲ್ಲಿಸಿಕೊಂಡು ಬನ್ನಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ಕೋಟಿ ಕೋಟಿ ಹಣ ಕೊಟ್ಟು ಮತ ಸೆಳೆಯುವ ಪ್ರಯತ್ನಕ್ಕೆ ಮುಂದಾಗಿರುವ ಮಹದೇವಪುರ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಗರ ಆಶ್ವಾಸನೆಗೆ ಬೆರಗಾಗದಿರಿ ಎಂದು ಮತದಾರರಿಗೆ ತಿಳಿಸಿದರು.

ಕಳೆದ ಐದು ವರ್ಷದ ಅಭಿವೃದ್ಧಿ ಕುರಿತ ಪ್ರತಿಗಳನ್ನು ಜನರಿಗೆ ತಲುಪಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದ ಅವರು, ವಾಮ ಮಾರ್ಗ ಹಿಡಿಯುವ ಕೆಲಸ ನಮ್ಮ ಪಕ್ಷದವರು ಮಾಡುವುದಿಲ್ಲ ಎಂದು ಹೇಳಿದರು.  ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯರಾದ ಶ್ವೇತಾ ವಿಜಯ್‍ಕುಮಾರ್, ಎಸ್.ಮುನಿಸ್ವಾಮಿ, ಆಶಾಸುರೇಶ್, ಮುಖಂಡರಾದ ರಾಜÁರೆಡ್ಡಿ, ಜಯಚಂದ್ರರೆಡ್ಡಿ, ಹೂಡಿ ಮಂಜು, ಕಬಡ್ಡಿ ಪಿಳ್ಳಪ್ಪ, ಚನ್ನಸಂದ್ರ ಚಂದ್ರಶೇಖರ್, ಅನಂತರಾಮಯ್ಯ, ಅಶೋಕ್‍ರೆಡ್ಡಿ, ಮಹೇಂದ್ರ ಮೋದಿ ಮತ್ತಿತರರಿದ್ದರು.

Facebook Comments

Sri Raghav

Admin