ದೇವನಹಳ್ಳಿಯ ರಾಣಿ ಸರ್ಕಲ್ ಸಮೀಪದ ಚೆಕ್‍ ಪೋಸ್ಟ್ ನಲ್ಲಿ 42 ಲಕ್ಷ ರೂ. ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

Black-Mani-01

ಬೆಂಗಳೂರು, ಏ.22-ದೇವನಹಳ್ಳಿಯ ರಾಣಿ ಸರ್ಕಲ್ ಸಮೀಪದ ಚೆಕ್‍ ಪೋಸ್ಟ್ ನಲ್ಲಿ ತಪಾಸಣೆ ವೇಳೆ ಖಾಸಗಿ ಬಸ್‍ನಲ್ಲಿ ಸಾಗಿಸುತ್ತಿದ್ದ 42 ಲಕ್ಷ ರೂ.ಗಳನ್ನು ಚುನಾವಣಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ.   ಈ ಸಂಬಂಧ ಬ್ಯಾಗ್‍ನಲ್ಲಿ ಹಣ ಸಾಗಿಸುತ್ತಿದ್ದ ವ್ಯಕ್ತಿಯನ್ನು ದೇವನಹಳ್ಳಿ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹೈದರಾಬಾದ್‍ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್‍ನ್ನು ಚುನಾವಣೆಗಾಗಿ ದೇವನಹಳ್ಳಿಯ ರಾಣಿ ಸರ್ಕಲ್ ಬಳಿ ನಿರ್ಮಿಸಿರುವ ಚೆಕ್‍ ಪೋಸ್ಟ್ ನಲ್ಲಿ ಅಧಿಕಾರಿಗಳು ತಪಾಸಣೆ ಮಾಡಿದಾಗ ಈ ಹಣ ದೊರೆತಿದೆ.

ವಿಚಾರಣೆ ವೇಳೆ ಹಣ ಸಾಗಿಸುತ್ತಿದ್ದ ವ್ಯಕ್ತಿ ಹಣಕ್ಕೆ ಯಾವುದೇ ದಾಖಲೆ ನೀಡದ ಕಾರಣ ಚುನಾವಣಾಧಿಕಾರಿಗಳು ಹಣವನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೇ ಚುನಾವಣಾ ಚೆಕ್‍ ಪೋಸ್ಟ್ ನಲ್ಲಿ ಮೊದಲು 52.53 ಲಕ್ಷ ನಂತರ 52.91 ಲಕ್ಷ ರೂ.ಗಳನ್ನು ಪತ್ತೆಹಚ್ಚಲಾಗಿತ್ತು. ಹೈದರಾಬಾದ್‍ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್‍ಗಳಲ್ಲಿ ಈ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಈ ಚೆಕ್‍ ಪೋಸ್ಟ್ ನಲ್ಲಿ ಇದುವರೆಗೆ ಸುಮಾರು ಒಂದೂವರೆ ಕೋಟಿಗೂ ಹೆಚ್ಚು ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಈ ಸಂಜೆಗೆ ಪೊಲೀಸರು ತಿಳಿಸಿದ್ದಾರೆ.

Facebook Comments

Sri Raghav

Admin