ಶಾಕಿಂಗ್ : ಬ್ಲೂ ಫಿಲ್ಮ್ ನೋಡಿ ಹೆತ್ತ ತಾಯಿಯನ್ನೇ ರೇಪ್ ಮಾಡಿದ ಮಗ…!

ಈ ಸುದ್ದಿಯನ್ನು ಶೇರ್ ಮಾಡಿ

Bule-Film-Sex-Film--01

ಪಲನ್‍ಪುರ್, ಏ.22- ತನ್ನ 46 ವರ್ಷದ ತಾಯಿಯ ಮೇಲೇ ಅತ್ಯಾಚಾರ ಎಸಗಿದ 22 ವರ್ಷದ ವಿಕೃತ ಕಾಮುಕ ಮಗನನ್ನು ಗುಜರಾತ್‍ನ ಪಟನ್ ಟೌನ್‍ನ ಜಲ್ ಚೌಕ್ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ. ಬ್ಲೂ ಫಿಲ್ಮ್ ವೀಕ್ಷಣೆಯ ವ್ಯಸನಿಯಾಗಿರುವ ಈ ನೀಚ ತಾಯಿ ಮೇಲೆ ತನ್ನ ಕಾಮತೃಷೆ ತೀರಿಸಿಕೊಂಡಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ.

ರೋಹನ್(ಹೆಸರು ಬದಲಾಯಿಸಲಾಗಿದೆ) ಗುರುವಾರ ಈ ಹೇಯ ಕೃತ್ಯ ಎಸಗಿದ್ದಾನೆ. ಅಶ್ಲೀಲ ಚಿತ್ರ ನೋಡುತ್ತಿದ್ದ ಈತ ನೀರು ಕುಡಿಯುವ ನೆಪದಲ್ಲಿ ತಾಯಿ ಮಲಗಿದ್ದ ಕೊಠಡಿಗೆ ಬಂದು ಆಕೆಯ ಮೇಲೆ ಬಲಾತ್ಕಾರ ನಡೆಸಿದ್ದಾನೆ. ಅತ್ಯಾಚಾರಕ್ಕೆ ಒಳಗಾದ ತಾಯಿ ಪೊಲೀಸರಿಗೆ ನೀಡಿದ ದೂರಿನ ಮೇಲೆ ವಿಕೃತ ಕಾಮಿಯನ್ನು ಬಂಧಿಸಲಾಯಿತು. ಮಗ ತನ್ನ ಮೇಲೆ ಅತ್ಯಾಚಾರ ಎಸಗುತ್ತಿದ್ದಾಗ ಮಹಿಳೆ ಸಹಾಯಕ್ಕಾಗಿ ಕೂಗಿಕೊಂಡರು. ಆದರೆ ಇವರ ಮನೆಯಲ್ಲಿ ಪ್ರತಿದಿನ ಜಗಳ ನಡೆಯುವುದು ಸಾಮಾನ್ಯವಾಗಿದ್ದ ಕಾರಣ ನೆರೆಹೊರೆಯವರು ರಕ್ಷಣೆಗೆ ಧಾವಿಸಲಿಲ್ಲ.

ತನ್ನ ಮೊಬೈಲ್‍ನಲ್ಲಿ ತಡ ರಾತ್ರಿವರೆಗೂ ಅಶ್ಲೀಲ ಚಿತ್ರಗಳನ್ನು ನೋಡುವುದು ಈತನ ದುರಾಭಾಸ್ಯವಾಗಿತ್ತು. ಅನೇಕ ಬಾರಿ ಈತ ತನ್ನ ತಾಯಿ ಮತ್ತು 20 ವರ್ಷದ ತಂಗಿಯ ಮುಂದೆಯೇ ವೀಡಿಯೋ ಬ್ಲೂ ಫಿಲ್ಮ್‍ಗಳನ್ನು ನೋಡುತ್ತಿದ್ದ. ಇತ್ತೀಚೆಗೆ ರೋಹನ್ ವರ್ತನೆಯಲ್ಲಿ ವಿಲಕ್ಷಣ ಬದಲಾವಣೆ ಕಂಡುಬಂದಿತ್ತು. ತನ್ನ ತಾಯಿಯನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದ ಆತ ಆಕೆಯನ್ನು ಲೈಂಗಿಕ ಸಹಕಾರಕ್ಕೂ ಒತ್ತಾಯಿಸಿದ್ದ. ಈ ಬಗ್ಗೆ ಸಂತ್ರಸ್ತೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.  ಈ ಘಟನೆಯಿಂದ ದಿಗ್ಭ್ರಮೆಗೆ ಒಳಗಾದ ಮಹಿಳೆ ಮೇಸ್ತ್ರಿ ಕೆಲಸ ಮಾಡುವ ತನ್ನ ಗಂಡನಿಗೆ ಈ ವಿಷಯ ತಿಳಿಸಿದರು. ಅವರು ಅಹಮದಾಬಾದ್‍ನಲ್ಲಿರುವ ತನ್ನ ಹಿರಿಯ ಮಗನಿಗೆ ಸುದ್ದಿ ಮುಟ್ಟಿಸಿ ಆತನ ಸಲಹೆ ಮೇರೆಗೆ ಮಹಿಳೆಯಿಂದ ದೂರು ದಾಖಲಿಸಿದರು. ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.

Facebook Comments

Sri Raghav

Admin