ಕಳೆದ 24 ಗಂಟೆಗಳಲ್ಲಿ 3.73 ಕೋಟಿ ರೂ. ವಶ

ಈ ಸುದ್ದಿಯನ್ನು ಶೇರ್ ಮಾಡಿ

500-notes
ಬೆಂಗಳೂರು, ಏ.23- ಕಳೆದ 24 ಗಂಟೆಗಳಲ್ಲಿ ಸ್ಟ್ಯಾಟಿಕ್ ಸರ್ವೈಲೆನ್ಸ್ ತಂಡ ಹಾಗೂ ಫ್ಲೈಯಿಂಗ್ ಸ್ಕ್ವಾಡ್ಸ್ 3.73 ಕೋಟಿ ರೂ ನಗದು, ರೇಷ್ಮೆ ಸೀರೆಗಳು ಸೇರಿದಂತೆ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದೆ. ಸ್ಟ್ಯಾಟಿಕ್ ಸರ್ವೈಲೆನ್ಸ್ ತಂಡವು 17 ರೇಷ್ಮೆ ಸೀರೆ, 168 ಇತರೆ ಸೀರೆ, ಒಂದು ವಾಹನ ಹಾಗೂ 2.91 ಕೋಟಿ ರೂ. ನಗದನ್ನು ವಶಪಡಿಸಿಕೊಂಡು ಎರಡು ಪ್ರಕರಣಗಳಲ್ಲಿ ಎಫ್‍ಐಆರ್ ದಾಖಲಿಸಿದೆ. ಫ್ಲೈಯಿಂಗ್ ಸ್ಕ್ವಾಡ್‍ಗಳು 4 ವಾಹನ, 10 ವಾಟರ್‍ಕ್ಯಾನ್, 300 ಗ್ಲಾಸ್, ರಾಜಕೀಯ ಪಕ್ಷಗಳ ಬಾವುಟ, ಕ್ಯಾಪ್, 274 ಸೀರೆಗಳು, 3.24 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದೆ. ಒಟ್ಟು 82.61 ಲಕ್ಷ ನಗದನ್ನು ವಶಪಡಿಸಿಕೊಂಡಿದೆ.   ಅಬಕಾರಿ ಇಲಾಖೆಯು 41,921.59 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದ್ದು, ಇದರ ಮೌಲ್ಯ 2.04 ಕೋಟಿ ರೂ. ಆಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಮೂಲಗಳು ತಿಳಿಸಿವೆ.

Facebook Comments

Sri Raghav

Admin