ಹೊರ ಜಿಲ್ಲೆಗಳಿಂದ ನೀರು ತರಿಸಿ ಜನರ ದಾಹ ನೀಗಿಸಿದ್ದೇನೆ : ಸಿ.ಟಿ.ರವಿ

ಈ ಸುದ್ದಿಯನ್ನು ಶೇರ್ ಮಾಡಿ

CT-Ravi-01

ಚಿಕ್ಕಮಗಳೂರು,ಏ.23- ಕಳೆದ 4 ವರ್ಷಗಳಿಂದ ಜಿಲ್ಲೆಯಲ್ಲಿ ಬರಗಾಲ ಆವರಿಸಿದ್ದು, ಹೊರ ಜಿಲ್ಲೆಗಳಿಂದ ನೀರು ತರಿಸಿ ಕ್ಷೇತ್ರದ ರೈತರಿಗೆ ಹಂಚಿಕೆ ಮಾಡಿದ್ದೇವೆ ಎಂದು ಶಾಸಕ ಸಿ.ಟಿ.ರವಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರಗಾಲದಲ್ಲಿ ಕ್ಷೇತ್ರದ ಜನರ ಜೊತೆಯಿದ್ದು ಕಷ್ಟ ಸುಖಗಳಿಗೆ ಸ್ಪಂದಿಸಿದ್ದೇವೆ. ಆ ಸಂದರ್ಭದಲ್ಲಿ ಬಿ.ಎಸ್.ಶಂಕರ್ ಎಲ್ಲಿ ಹೋಗಿದ್ದರು? ಈ ಕ್ಷೇತ್ರದಲ್ಲಿ ಮತ ಯಾಚಿಸಲು ಹಕ್ಕಿಲ್ಲ. ಜಿಲ್ಲೆಗೆ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕಾಲೇಜು ಮಂಜೂರು ಮಾಡಿಸಿದ್ದೆ. ಅದಕ್ಕೆ ಮಂಜೂರು ಮಾಡಿಸುವಲ್ಲಿ ಬಿ.ಎಸ್.ಶಂಕರ್ ಶ್ರಮ ವಹಿಸಬಹುದಿತ್ತಿಲ್ಲ ಎಂದು ಪ್ರಶ್ನಿಸಿದರು.

ಚಿಕ್ಕಮಗಳೂರು ಮೂಡಗೆರೆ ರಾಷ್ಟ್ರೀಯ ಹೆದ್ದಾರಿ ರಸ್ತೆಗೆ 297 ಕೋಟಿ, ನಗರದ ಯುಜಿಡಿ ಕಾಮಗಾರಿಗೆ 82 ಕೋಟಿ, ಶಾಶ್ವತ ಕುಡಿಯುವ ನೀರು ಒದಗಿಸಲು ಅಮೃತ್ ಯೋಜನೆ ಮಂಜೂರು ಮಾಡಿಸಿದ್ದೇನೆ. ಇವು ದೂರದೃಷ್ಟಿ ಇಟ್ಟುಕೊಂಡೇ ಮಾಡಿದ ಕೆಲಸ. ಬಿ.ಎಸ್.ಶಂಕರ್ ಸಭಾಪತಿಯಾಗಿದ್ದಾಗ ಚಿಕ್ಕಮಗಳೂರು ಕಡೂರು ರಸ್ತೆ, ಮಲ್ಲೇನಹಳ್ಳಿ ತೊಗರಿಹಂಕಲ್ ರಸ್ತೆ ಹೇಗಿದ್ದಾವು? ಈಗ ಹೇಗೆ ಅಭಿವೃದ್ದಿಯಗಿದೆ ಎಂದು ನೋಡಿಬರಲಿ ಎಂದರು.

ರಾಜ್ಯ ಮತ್ತು ರಾಷ್ಟ್ರ ನಾಯಕ ಒಡನಾಟ ಇಟ್ಟುಕೊಂಡಿರುವ ಶಂಕರ್ ಜಿಲ್ಲೆಗೆ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು. ಇವರು ಎಂದಾದರೂ ಜನರ ಜೊತೆ ಇದ್ದಾರೆಯೇ ಕಾಂಗ್ರೆಸ್ ಪರ ಜನರ ಒಲವು ಇದ್ದಾಗ ಬೆಂಗಳೂರಿನ ಬಾಪರಹಳ್ಳಿಯಲ್ಲಿ ಸೋತ್ತಿದ್ದೇಕೆ? 1998ರ ಲೋಕಸಭಾ ಚುನಾವಣೆಯಲ್ಲಿ ಎಷ್ಟು ಮತಗಳಿಂದ ಸೋತಿದ್ದರು ಎಂಬುದನ್ನು ನೆನಪಿಸಿಕೊಳ್ಳಲಿ, ಇನ್ನೊಬ್ಬರ ಬಗ್ಗೆ ಟೀಕಿಸುವ ಮೊದಲು ತಮ್ಮ ಬಗ್ಗೆ ಮನನ ಮಾಡಿಕೊಳ್ಳಿ ಎಂದು ತಿರುಗೇಟು ನೀಡಿದರು.

ಬಿ.ಎಸ್.ಶಂಕರ್ ಅವರ ಅಕ್ಕ-ಪಕ್ಕ ಗುತ್ತಿಗೆದಾರರನ್ನು ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಕರಗಡ ಯೋಜನೆ ಬಗ್ಗೆ 20 ಕೋಟಿ ಮಂಜೂರು ಮಾಡಿಸಿರುವುದು ನಿಜವೇ ಆದರೆ ದಾಖಲೆ ಬಿಡುಗಡೆಗೊಳಿಸಿ ಎಂದು ಸವಾಲು ಹಾಕಿದರು. ಚುನಾವಣೆಗೋಸ್ಕರ ನಗರದಲ್ಲಿ ಮನೆ ಮಾಡಿ ಚುನಾವಣೆ ಮುಗಿದ ನಂತರ ಮನೆ ಖಾಲಿ ಮಾಡುವವರನ್ನು ನಾನು ನೋಡಿದ್ದೇನೆ. ಅದೇ ರೀತಿ ಬಿ.ಎಸ್.ಶಂಕರ್ ಅವರು ಮೇ 15ರ ನಂತರ ಅವರ ಮನೆ ಖಾಲಿ ಕೊಂಡಿಕೊಂಡು ವಿಳಾಸ ಬದಲಾಯಿಸುವುದನ್ನು ಜನ ನೋಡಲಿದ್ದಾರೆ ಎಂದು ವ್ಯಂಗ್ಯವಾಡಿದರು..

Facebook Comments

Sri Raghav

Admin