ಆ್ಯಂಬುಲೆನ್ಸ್’ನಲ್ಲೇ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

ಈ ಸುದ್ದಿಯನ್ನು ಶೇರ್ ಮಾಡಿ

108

ಬಳ್ಳಾರಿ, ಏ.24- ಆ್ಯಂಬುಲೆನ್ಸ್ ನಲ್ಲಿ ಮಹಿಳೆಯೊಬ್ಬರು ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.   ಇಂದು ಬೆಳಗ್ಗೆ ತಾಳೆ ಬಸಾಪುರ ತಾಂಡಾದ ಗರ್ಭಿಣಿ ಶಾರದಾ ಬಾಯಿಯವರು ತೀವ್ರ ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದಾಗ ತಕ್ಷಣ ಅವರನ್ನು 108 ಆ್ಯಂಬುಲೆನ್ಸ್‍ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು.  ಆದರೆ ಆ್ಯಂಬುಲೆನ್ಸ್‍ನಲ್ಲೇ ಶಾರದಾಬಾಯಿ ಅವರು 2 ಗಂಡು ಹಾಗೂ 1 ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆ್ಯಂಬುಲೆನ್ಸ್‍ನಲ್ಲಿದ್ದ ತುರ್ತು ಚಿಕಿತ್ಸಕರಾದ ನಾಗೇಂದ್ರ , ವಾಹನದ ಚಾಲಕ ಶ್ರೀಕಾಂತ್ ಅವರ ಸಮಯ ಪ್ರಜ್ಞೆಯಿಂದ ಪ್ರಸವ ಸುಲಲಿತವಾಗಿದೆ. ತಾಯಿ ಹಾಗೂ ಮಕ್ಕಳು ಆರೋಗ್ಯದಿಂದಿದ್ದು , ಇವರ ಮುಂದಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಜ್ಞೆಯಿಂದ ಪ್ರಸವ ಸುಲಲಿತವಾಗಿದೆ.  ತಾಯಿ ಹಾಗೂ ಮಕ್ಕಳು ಆರೋಗ್ಯದಿಂದಿದ್ದು , ಇವರ ಮುಂದಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Facebook Comments

Sri Raghav

Admin