ಬೆಂಗಳೂರಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ, ಧರೆಗುರಿಳಿದ ಮರ, ವಿದ್ಯುತ್ ಕಂಬ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.24-ಉದ್ಯಾನನಗರಿ ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನ ಸುರಿದ ಭಾರೀ ಗಾಳಿ ಮಳೆ ಸುರಿದು ಕೆಲವೆಡೆ ಸಂಚಾರಕ್ಕೂ ಅಡಚಣೆ ಉಂಟಾಯಿತು. ಇಂದು ಮಧ್ಯಾಹ್ನ ಗುಡುಗು, ಮಿಂಚು ಸಹಿತ ಮಳೆ ನಗರದ ಕೆಲವೆಡೆ ಬಿದ್ದಿದೆ. ರಾಜಾಜಿನಗರದ ರಾಜ್‍ಕುಮಾರ್ ರಸ್ತೆಯಲ್ಲಿ ಭಾರೀ ಗಾಳಿ ಮಳೆಯಿಂದ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಮರ ಹಾಗೂ ವಿದ್ಯುತ್ ಕಂಬ ಉರುಳಿ ಬಿದ್ದಿವೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಪಾರಾಗಿದ್ದಾರೆ. ಇನ್ನು ಕೆಲವು ಕಡೆ ಮರದ ಕೊಂಬೆಗಳು ಮುರಿದು ಬಿದ್ದು ಸಂಚಾರಕ್ಕೆ ಅಡಚಣೆಯಾಗಿದ್ದರೆ, ಮತ್ತೆ ಕೆಲವು ಕಡೆ ನಿಂತಿದ್ದ ವಾಹನಗಳ ಮೇಲೂ ಮರಗಳು ಬಿದ್ದ ವರದಿಯಾಗಿದೆ. ದಿಢೀರನೆ ಸುರಿದ ಅಕಾಲಿಕ ಮಳೆಯಿಂದ ನಗರದ ನಾಗರಿಕರು ಕೆಲಕಾಲ ಆಂತಕಕ್ಕೀಡಾಗಿದ್ದರು.

Ola--01

Facebook Comments

Sri Raghav

Admin