ವಾರದ ಹಿಂದಷ್ಟೆ ಅಧಿಕಾರವಹಿಸಿಕೊಂಡಿದ್ದ ಹಾಸನ ಡಿಸಿ ಮತ್ತೆ ಎತ್ತಂಗಡಿ

ಈ ಸುದ್ದಿಯನ್ನು ಶೇರ್ ಮಾಡಿ

randeep-1
ಹಾಸನ,ಏ.24- ಹಲವು ವಿದ್ಯಮಾನಗಳ ಹಗ್ಗಜಗ್ಗಾಟದ ನಂತರ ಹಾಸನ ಜಿಲ್ಲಾಧಿಕಾರಿಯಾಗಿ ನೇಮಕವಾಗಿದ್ದ ಡಿ.ರಂದೀಪ್ ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ ಆದೇಶ ಹೊರಬಿದ್ದ ತಿಂಗಳವರೆಗೂ ಯಾವುದೇ ಸ್ಥಳ ಸೂಚಿಸದ ಹಿನ್ನೆಲೆಯಲ್ಲಿ ಅತಂತ್ರ ಪರಿಸ್ಥಿತಿ ಎದುರಿಸುತ್ತಿದ್ದ ರಂದೀಪ್ ಅವರು ವಾರದ ಹಿಂದಷ್ಟೆ ಹಾಸನದಲ್ಲಿ ಜಿಲ್ಲಾಧಿಕಾರಿಯಾಗಿ ಅಧಿಕಾರವಹಿಸಿಕೊಂಡಿದ್ದರು.

ಈಗ ಮತ್ತೆ ಅವರನ್ನು ಬೇರೆಡೆಗೆ ನೇಮಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಜಿಲ್ಲಾ ಪಂಚಾಯಿತಿ ಸಿಇಓ ಆಗಿದ್ದ ಜಾನಕಿ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಹಾಸನದ ನೂತನ ಜಿಲ್ಲಾಧಿಕಾರಿಯಾಗಿ ಪಿ.ಸಿ.ಜಾಫರ್ ಅವರನ್ನು ನೇಮಿಸಿದೆ.

Facebook Comments

Sri Raghav

Admin