ಸಿಎಂಗೆ ವರುಣಾ ಕ್ಷೇತ್ರದಲ್ಲಿ 5 ಕ್ವಿಂಟಾಲ್ ಹೂವಿನ ಸುರಿಮಳೆ

ಈ ಸುದ್ದಿಯನ್ನು ಶೇರ್ ಮಾಡಿ

siddaramayya---mahadevappa

ನಂಜನಗೂಡು, ಏ.24- ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಎಚ್.ಸಿ.ಮಹದೇವಪ್ಪ ಅವರುಗಳು ವರುಣಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಯತೀಂದ್ರ ಸಿದ್ದರಾಮಯ್ಯನವರ ಪರ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಗ್ರಾಮಸ್ಥರು ಹಾಗೂ ಕಾರ್ಯಕರ್ತರು ಕ್ರೇನ್ ಮೂಲಕ ಐದು ಕ್ವಿಂಟಾಲ್ ಹೂವಿನ ಮಳೆಗೈದರು.   ಇದೇ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಡವರ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜನರಿಗೆ ತಂದಿದ್ದು, ಮುಂದೆಯೂ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಆಗ ಇನ್ನೂ ಹೆಚ್ಚಿನ ಯೋಜನೆಗಳನ್ನು ನೀಡಲಿದ್ದೇವೆ. ಹಾಗಾಗಿ ಕಾಂಗ್ರೆಸ್ ಬೆಂಬಲಿಸಿ ಎಂದರು.

ಬಸವಣ್ಣನವರು ಸಮಾನತೆ ಸಾರಿದ ತತ್ವದಡಿ ಎಲ್ಲ ವರ್ಗಗಳ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ನುಡಿದಂತೆ ನಡೆದು ದೇಶದಲ್ಲೆ ನಂಬರ್ ಒನ್ ಸರ್ಕಾರವೆನಿಸಿದೆ ಹಾಗೂ 8150 ಕೋಟಿ ರೂ. ರೈತರ ಸಾಲ ಮನ್ನಾ ಮಾಡಿ, ರೈತಾಪಿ ವರ್ಗದ ಸರ್ಕಾರ ಎನಿಸಿದೆ. ಆದ್ದರಿಂದ ಎಲ್ಲರೂ ಕಾಂಗ್ರೆಸ್ ಬೆಂಬಲಿಸಿ ಡಾ.ಯತೀಂದ್ರ ಸಿದ್ದರಾಮಯ್ಯನವರನ್ನು ವಿಜಯಶಾಲಿಯಾಗುವಂತೆ ಮಾಡಬೇಕೆಂದು ಮನವಿ ಮಾಡಿದರು.  ಜಿಪಂ ಸದಸ್ಯ ಹೆಚ್.ಎನ್.ನಂಜಪ್ಪ, ಗುರುಪಾದಸ್ವಾಮಿ, ಮುಖಂಡ ಹೆಚ್.ಸಿ.ನಿಂಗಯ್ಯ, ಪ್ರಮೋದ್ ಕುಮಾರ್, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ಗುರುಮಲ್ಲಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಡ್ಯ ರಂಗಸ್ವಾಮಿ, ತಾಪಂ ಉಪಾಧ್ಯಕ್ಷ ಹೆಜ್ಜಿಗೆ ಗೋವಿಂದರಾಜನ್, ಕೆಪಿಸಿಸಿ ಸದಸ್ಯ ಹೆಚ್.ಸಿ.ಬಸವರಾಜು ಮತ್ತಿತರರಿದ್ದರು.

Facebook Comments

Sri Raghav

Admin