ಬೆಂಗಳೂರಿನ ಮೂವರು ಮಕ್ಕಳು ಸೇರಿ ನಾಲ್ವರು ನೀರು ಪಾಲು

ಈ ಸುದ್ದಿಯನ್ನು ಶೇರ್ ಮಾಡಿ

Suicide-Water-02

ಚಿಕ್ಕಬಳ್ಳಾಪುರ,ಏ.25-ಬೆಂಗಳೂರಿನಿಂದ ಎರಡು ಕುಟುಂಬದವರು ಚಿಕ್ಕಬಳ್ಳಾಪುರಕ್ಕೆ ಹೋಗಿದ್ದಾಗ ಕೆರೆಯಲ್ಲಿ ಮುಳುಗಿ ಮೂವರು ಮಕ್ಕಳು ಸೇರಿ ನಾಲ್ಕು ಮಂದಿ ನೀರು ಪಾಲಾಗಿರುವ ಘಟನೆ ನಡೆದಿದೆ. ಬೆಂಗಳೂರಿನ ನೀಲಸಂದ್ರ ಮತ್ತು ಭೂಪಸಂದ್ರ ನಿವಾಸಿಗಳಾದ ಸಬಾ(12),ಹುರಿಯಾ(8), ಸೌದತ್(10) ಮತ್ತು ಆಸಿಫ್(26) ನೀರು ಪಾಲಾದ ದುರ್ದೈವಿಗಳು.

ಚಿಕ್ಕಬಳ್ಳಾಪುರದ ಶ್ರೀನಿವಾಸ ನಗರದಲ್ಲಿರುವ ಸಾಗರ ಕೆರೆ ವೀಕ್ಷಿಸಲು ಎರಡು ಕುಟುಂಬಗಳು ತೆರಳಿದ್ದವು. ಈ ವೇಳೆ ಕೆರೆ ಬಳಿ ಆಸಿಫ್ ಅವರು ಮಕ್ಕಳನ್ನು ಆಟವಾಟಡಿಸುತ್ತಿದ್ದಾಗ ಒಂದು ಮಗು ಕಾಲು ಜಾರಿ ನೀರಿನಲ್ಲಿ ಮುಳುಗಿದೆ.ಆಮಗುವನ್ನು ರಕ್ಷಿಸಲು ಆಸಿಫ್ ಮುಂದಾಗುತ್ತಿದ್ದಂತೆ ಇನ್ನಿಬ್ಬರು ಮಕ್ಕಳೂ ನೀರಿನಲ್ಲಿ ಮುಳುಗಿದ್ದಾರೆ. ತಕ್ಷಣ ಸಹಾಯಕ್ಕಾಗಿ ಕುಟುಂಬದವರು ಕೂಗಿಕೊಂಡಿದ್ದಾರೆ.ನೋಡು ನೋಡುತ್ತಿದ್ದಂತೆ ಮೂವರು ಮಕ್ಕಳೊಂದಿಗೆ ಆಸಿಫ್ ಜಲಸಮಾದಿಯಾಗಿದ್ದಾರೆ. ಮೃತರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.

Facebook Comments

Sri Raghav

Admin