ಭಾರತ-ಮಂಗೋಲಿಯಾ ಆರ್ಥಿಕ ಸಹಕಾರ ಬಲವರ್ಧನೆ

ಈ ಸುದ್ದಿಯನ್ನು ಶೇರ್ ಮಾಡಿ

Sushma--01
ಉಲಾನ್‍ಬಾತರ್, ಏ.25-ಮೂಲಸೌಕರ್ಯಾಭಿವೃದ್ದಿ, ಇಂಧನ, ಸೇವೆಗಳು ಹಾಗೂ ಮಾಹಿತಿ ತಂತ್ರಜ್ಞಾನದಂಥ ಕ್ಷೇತ್ರಗಳಲ್ಲಿ ಪರಸ್ಪರ ಆರ್ಥಿಕ ಸಹಕಾರ ಬಲವರ್ಧನೆಗಾಗಿ ಭಾರತ ಮತ್ತು ಮಂಗೋಲಿಯಾ ಇಂದು ಮಹತ್ವದ ಚರ್ಚೆ ನಡೆಸಿದವು. ನವದೆಹಲಿ ಮತ್ತು ಮಂಗೋಲಿಯಾ ರಾಜಧಾನಿ ಉಲಾನ್‍ಬಾತರ್ ನಡುವೆ ನೇರ ವಿಮಾನಯಾನ ಸೇವೆ ಆರಂಭಿಸುವ ಸಾಧ್ಯತೆಗಳ ಅನ್ವೇಷಣೆ ಬಗ್ಗೆಯೂ ಉಭಯ ದೇಶಗಳು ಮಹತ್ವದ ಸಮಾಲೋಚನೆ ನಡೆಸಿವೆ.

ಭಾರತ-ಮಂಗೋಲಿಯಾ ಸಹಕಾರ ಜಂಟಿ ಸಮಿತಿಯ ಆರನೇ ಅಧಿವೇಶನದ ನಂತರ ಅಲ್ಲಿನ ವಿದೇಶಾಂಗ ಸಚಿವ ಡಿ. ಸ್ಟೋಗ್‍ಬಾತರ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ಉಭಯ ದೇಶಗಳ ನಡುವೆ ಆರ್ಥಿಕ ಸಹಕಾರ ಬಲವರ್ಧನೆಗೆ ಹೆಚ್ಚು ಆದ್ಯತೆ ನೀಡಲಾಗಿದೆ ಎಂದರು. ಪರಸ್ಪರ ಹಿತಾಸಕ್ತಿಯ ಎಲ್ಲ ವಲಯಗಳಲ್ಲಿ ಸಹಕಾರದ ಹೊಸ ಕ್ಷೇತ್ರಗಳನ್ನು ಗುರುತಿಸಲು ಹಾಗೂ ದ್ವಿಪಕ್ಷೀಯ ವ್ಯಾಪಾ ಮತ್ತು ಬಂಡವಾಳ ಹೂಡಿಕೆಗಳನ್ನು ವೃದ್ದಿಸಲು ಮಾರ್ಗೋಪಾಯಗಳನ್ನು ಕಂಡುಕೊಳ್ಳುವ ಬಗ್ಗೆ ಚರ್ಚೆ ನಡೆಸಿದ್ದಾಗಿ ಸುಷ್ಮಾ ತಿಳಿಸಿದರು.

Facebook Comments

Sri Raghav

Admin