ಅಸ್ಸಾಂ ಸಂಪುಟ ವಿಸ್ತರಣೆ : 7 ಸಚಿವರ ಸೇರ್ಪಡೆ

ಈ ಸುದ್ದಿಯನ್ನು ಶೇರ್ ಮಾಡಿ

Asasasam

ಗುವಾಹತಿ, ಏ.26-ಈಶಾನ್ಯ ರಾಜ್ಯ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಇಂದು ಏಳು ಹೊಸ ಸಚಿವರನ್ನು ಸೇರ್ಪಡೆ ಮಾಡಿಕೊಳ್ಳುವ ಮೂಲಕ ತಮ್ಮ ಮಂತ್ರಿ ಮಂಡಲ ವಿಸ್ತರಿಸಿದರು.  ಎನ್‍ಡಿಎ ಸರ್ಕಾರ 2016ರಲ್ಲಿ ನೇತೃತ್ವಕ್ಕೆ ಬಂದ ನಂತರ ಇದೇ ಮೊದಲ ಬಾರಿ ಸಂಪುಟ ವಿಸ್ತರಣೆಯಾಗಿದ್ದು, ನಾಲ್ವರು ಸಂಪುಟ ದರ್ಜೆ ಸಚಿವರು ಹಾಗೂ ಮೂವರು ರಾಜ್ಯ ಸಚಿವರು ಮಂತ್ರಿ ಮಂಡಲಕ್ಕೆ ಸೇರ್ಪಡೆಯಾಗಿದ್ದಾರೆ.

ರಾಜಧಾನಿ ಗುವಾಹತಿಯ ರಾಜಭವನದಲ್ಲಿ ಇಂದು ನಡೆದ ಸಮಾರಂಭದಲ್ಲಿ ರಾಜ್ಯಪಾಲ ಜಗದೀಶ್ ಮುಖಿ ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು. ಮೇ 24, 2016ರಲ್ಲಿ ಸರ್ಬಾನಂದ ಸೋನೊವಾಲ್ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು, ಮುಖ್ಯ ಮಂತ್ರಿ ಸೇರಿದಂತೆ 11 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin