ಕುಕ್ಕರಹಳ್ಳಿ ಕೆರೆಯಲ್ಲಿ ಮತ್ತೊಂದು ಪೆಲಿಕಾನ್ ಪಕ್ಷಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

bird--01
ಮೈಸೂರು, ಏ.26-ನಗರದ ಕುಕ್ಕರಹಳ್ಳಿಕೆರೆಯಲ್ಲಿ ಮತ್ತೊಂದು ಪೆಲಿಕಾನ್ ಪಕ್ಷಿ ಸಾವನ್ನಪ್ಪಿದೆ. ಕುಕ್ಕರಹಳ್ಳಿ ಕೆರೆಯಲ್ಲಿ ಪೆಲಿಕಾನ್ ಪಕ್ಷಿ ನಿನ್ನೆ ಸಾವನ್ನಪ್ಪಿದ್ದು, ಕೆಲದಿನಗಳ ಹಿಂದೆ ಇದೇ ಕೆರೆಯಲ್ಲಿ ಎರಡು ಪೆಲಿಕಾನ್ ಪಕ್ಷಿಗಳು ಸಾವನ್ನಪ್ಪಿದ್ದವು. ಇದೀಗ ಮತ್ತೊಂದು ಪಕ್ಷಿ ಸಾವನ್ನಪ್ಪಿರುವುದು ಆತಂಕಕ್ಕೀಡು ಮಾಡಿದೆ. ಮೃತಪಕ್ಷಿಯ ಕಳೇಬರವನ್ನು ಪ್ರಯೋಗಾಲಯಕ್ಕೆ ಪಶುವೈದ್ಯರು ಕಳುಹಿಸಿದ್ದಾರೆ. ಲ್ಯಾಬ್‍ನಿಂದ ವರದಿ ಬಂದ ನಂತರ ಪಕ್ಷಿ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ.

Facebook Comments

Sri Raghav

Admin