ಮೃಗಾಲಯದಲ್ಲಿ ಪ್ರೇಕ್ಷಕರ ಮನಗೆದ್ದ ನವಜಾತ ವಾಂಬ್ಯಾಟ್

ಈ ಸುದ್ದಿಯನ್ನು ಶೇರ್ ಮಾಡಿ

ds-1
ಜರ್ಮನಿಯ ಡುಯಿಸ್‍ಬರ್ಗ್ ಮೃಗಾಲಯದಲ್ಲಿ ಅತಿ ಅಪರೂಪದ ಪ್ರಾಣಿಯೊಂದು ಜನಿಸಿದೆ. ವಾಂಬ್ಯಾಟ್ ಸಸ್ತನಿಯ ಈ ಪುಟ್ಟ ಮರಿ ಪ್ರಾಣಿ ಪ್ರಿಯರಿಗೆ ಸ್ಮಾಲ್ ಸೆನ್ಷೆಷನ್ ಆಗಿದೆ. ಬನ್ನಿ ಈ ಮರಿಯನ್ನು ನಾವೂ ನೋಡೋಣ..

ವಾಂಬ್ಯಾಟ್-ಅವನತಿಯ ಅಂಚಿನಲ್ಲಿರುವ ಸಸ್ತನಿ. ಇದು ವಾಂಬ್ಯಾಟಿಡೇ ವಂಶದ ಸಸ್ಯಾಹಾರಿ ಪ್ರಾಣಿ. ಪುಟ್ಟ ಕರಡಿಯಂತಿರುವ ಹಾಗೂ ಕಾಂಗೂರವನ್ನು ಹೋಲು ವಾಂಬ್ಯಾಟ್ ಗಿಡ್ಡ ಕಾಲುಗಳು ಮತ್ತು ಹೊಟ್ಟೆ ಚೀಲವನ್ನು ಹೊಂದಿರುತ್ತದೆ. ನೆಲ ಕೆರೆಯುವುದು ಈ ಸಸ್ತನಿಯ ಅಭ್ಯಾಸ.  ಆಸ್ಟ್ರೇಲಿಯಾದ ಕಾಂಗೂರುವಿನಂತೆ ಇದೂ ಕೂಡ ಉದರ ಚೀಲದ ಪ್ರಾಣಿ. ಮರಿಯನ್ನು ಹೊಟ್ಟೆಯ ಹೊರಗಿರುವ ಚೀಲದಲ್ಲಿ ಇಟ್ಟುಕೊಂಡು ವೇಗವಾಗಿ ಓಡಬಲ್ಲ ಈ ಪ್ರಾಣಿ ತುಂಬಾ ಸಂಕೋಚ ಸ್ವಭಾವದ್ದು.

ಜರ್ಮನಿಯ ಡುಯಿಸ್‍ಬರ್ಗ್‍ನಲ್ಲಿ ಈ ಅಪರೂಪದ ಜೀವಿ ಮರಿಯೊಂದಕ್ಕೆ ಜನ್ಮ ನೀಡಿರುವುದು ಪ್ರಾಣಿ ಪ್ರಿಯರಲ್ಲಿ ಸಂತಸ ಮೂಡಿಸಿದೆ. 40 ವರ್ಷಗಳ ಬಳಿಕ ವಾಂಬ್ಯಾಟ್ ಮರಿ ಇಲ್ಲಿ ಜನಿಸಿರುವುದು ಮತ್ತೊಂದು ಹೆಗ್ಗಳಿಕೆ.  ವಾಂಬ್ಯಾಟ್ ಮರಿಗೆ ಅಪಾರಿ ಎಂದು ಹೆಸರಿಡಲಾಗಿದೆ. ಇದು ಜನಿಸಿದ ಆರಂಭಿಕ ವಾರಗಳು ಅತ್ಯಂತ ಸೂಕ್ಷ್ಮವಾಗಿರುತ್ತವೆ. ಮರಿ ತುಂಬಾ ಚಿಕ್ಕದಾಗಿರುವುದರಿಂದ ತಾಯಿಯು ಅದನ್ನು ತನ್ನ ಹೊಟ್ಟೆಯ ಚೀಲದಲ್ಲಿ ಅತ್ಯಂತ ಮುತುವರ್ಜಿಯಿಂದ ಪಾಲನೆ ಮಾಡುತ್ತದೆ. ಐದು ತಿಂಗಳ ಬಳಿಕ ಮರಿ ದೊಡ್ಡದಾದ ನಂತರ ಅದು ಹೊರಗೆ ಬರುತ್ತದೆ. ಆದರೂ ಹೊರ ಪ್ರಪಂಚದ ಪರಿಚಯವಿಲ್ಲದ ಮರಿ ಹೆದರಿಕೆಯಿಂದ ತನ್ನ ತಾಯಿಯ ಉದರ ಚೀಲದೊಳಗೆ ಅವಿತುಕೊಳ್ಳುವುದುಂಟು..

Facebook Comments