ಚುನಾವಣಾ ರಣರಂಗದಲ್ಲಿ ಅತೀ ಹಿರಿಯ – ಕಿರಿಯ ಸ್ಪರ್ಧಾಳುಗಳು ಇವರೇ..!

ಈ ಸುದ್ದಿಯನ್ನು ಶೇರ್ ಮಾಡಿ

shamanuru-manjunatha

ಬೆಂಗಳೂರು, ಏ.29- ಈ ಬಾರಿಯ ಚುನಾವಣಾಕಣದಲ್ಲಿ ಅತಿ ಹಿರಿಯ ರಾಜಕೀಯ ಮುತ್ಸದ್ಧಿಗಳು ಪಾಲ್ಗೊಂಡು ತಮ್ಮ ಅದೃಷ್ಟ ಪರೀಕ್ಷೆಗೆ ಮತ್ತೊಮ್ಮೆ ಮುಂದಾಗಿದ್ದಾರೆ. ಅತಿ ಕಿರಿಯ ಸ್ಪರ್ಧಾರ್ಥಿಗಳು ತಮ್ಮ ರಾಜಕೀಯ ಭವಿಷ್ಯಕ್ಕೆ ಮುನ್ನುಡಿ ಬರೆಯಲು ಅಣಿಯಾಗಿದ್ದಾರೆ. ವಿಧಾನಸಭಾ ಚುನಾವಣಾ ಕಣದಲ್ಲಿರುವ ಹಿರಿಯ ರಾಜಕಾರಣಿ ಎಂದರೆ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿರುವ ಶ್ಯಾಮನೂರು ಶಿವಶಂಕರಪ್ಪ, ಅತ್ಯಂತ ಕಿರಿಯ ವಯಸ್ಸಿನ ಅಭ್ಯರ್ಥಿ ಎಂದರೆ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಮಂಜುನಾಥ್‍ಗೌಡ. ಇಬ್ಬರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು. ಶಾಮನೂರು ಶಿವಶಂಕರಪ್ಪ ಅವರು ಅತ್ಯಂತ ಪ್ರಭಾವಿ ರಾಜಕಾರಣಿ 87 ವರ್ಷ ವಯೋಮಾನದವರು.

ಆದರೂ ಅವರಿಗೆ ಪಕ್ಷ ಟಿಕೆಟ್ ಕೊಟ್ಟು ಕಣಕ್ಕಿಳಿಸಿದೆ. ಮಂಜುನಾಥ್‍ಗೌಡ ಯುವ ನಾಯಕ.  ಎನ್‍ಎಸ್‍ಯುಐನಿಂದ ಎರಡು ಬಾರಿ ರಾಜ್ಯಾಧ್ಯಕ್ಷರಾಗಿದ್ದವರು.
ಕೇವಲ 27 ವರ್ಷ ವಯಸ್ಸಿನವರು. ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡಿ ಕಾಂಗ್ರೆಸ್ ಪಕ್ಷ ಕಣಕ್ಕಿಳಿಸಿದೆ. ಇನ್ನುಳಿದಂತೆ ಸಾಗರ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಗೋಡು ತಿಮ್ಮಪ್ಪ 86 ವರ್ಷದ ಹಿರಿಯ ರಾಜಕಾರಣಿ. ಅತ್ಯಂತ ಅನುಭವಿ. ಈ ಇಳಿವಯಸ್ಸಿನಲ್ಲೂ ಸಕ್ರಿಯವಾಗಿರುವ ಜನಸೇವಕರು.

ಯಾದಗಿರಿ ಕ್ಷೇತ್ರದಿಂದ ಸ್ಪರ್ಧಿಸಿರುವ ಸತತ ಆರು ಬಾರಿ ಶಾಸಕರಾಗಿ ಮತ್ತೊಮ್ಮೆ ಕಣಕ್ಕಿಳಿದಿರುವ ಮತ್ತೊಬ್ಬ ಹಿರಿಯ ರಾಜಕಾರಣಿಯೆಂದರೆ ಎ.ಬಿ.ಮಾಲಕರೆಡ್ಡಿ 75 ವರ್ಷ ವಯೋಮಾನದವರು. ಇನ್ನು ಕೆ.ಬಿ.ಕೋಳಿವಾಡ ಅವರಿಗೆ 74 ವರ್ಷ. ಬಿಜೆಪಿಯಲ್ಲಿ ಯಡಿಯೂರಪ್ಪನವರಿಗೆ 75 ವರ್ಷ. ಅತ್ಯಂತ ಕಿರಿಯ ರಾಜಕಾರಣಿಗಳೆಂದರೆ ಗುಲ್ಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಬಿಜೆಪಿ ದತ್ತಾತ್ರೇಯ ಪಾಟೀಲ್ ರೇವೂರ, ಬೆಂಗಳೂರಿನ ಜಯನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಸೌಮ್ಯರೆಡ್ಡಿ, ಗೋವಿಂದರಾಜನಗರ ಕ್ಷೇತ್ರದಿಂದ ಸ್ಪರ್ಧಿಸಿರುವ ಪ್ರಿಯಾಕೃಷ್ಣ, ಕೆಜಿಎಫ್‍ನಿಂದ ಸ್ಪರ್ಧಿಸಿರುವ ಮಾಜಿ ಶಾಸಕ ಸಂಪಂಗಿ ಪುತ್ರಿ ವೈ.ಎಸ್.ಅಶ್ವಿನಿ ಅವರು 31ರ ಆಸುಪಾಸಿನವರು.

Facebook Comments

Sri Raghav

Admin