ಬಿಜೆಪಿ ಜತೆ ದೇವೇಗೌಡರು ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎನ್ನುವುದಕ್ಕೆ ಸಿದ್ದರಾಮಯ್ಯಗೆ ನಾಚಿಕೆ ಆಗಲ್ವಾ?

ಈ ಸುದ್ದಿಯನ್ನು ಶೇರ್ ಮಾಡಿ

Devegowda-Siddaramaiah--01

ಸಿದ್ದರಾಮಯ್ಯ ಅವರಿಗೆ ನಾಚಿಕೆ ಆಗಲ್ವಾ? ಬಿಜೆಪಿ ಜತೆ ದೇವೇಗೌಡರು ಹೊಂದಾಣಿಕೆ ಮಾಡಿಕೊಂಡಿದ್ದಾರೆ ಅಂತ ಸಿಎಂ ಎಷ್ಟು ಸಾರಿ ಹೇಳ್ತಾರೆ ಇಷ್ಟು ಕೀಳು ಮಟ್ಟದ ರಾಜಕಾರಣ ಕಾಂಗ್ರೆಸ್ ಮಾಡುತ್ತೆ ಅಂತ ಗೊತ್ತಿರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಪ್ರಧಾನಿ ಎಚ್ಡಿ.ದೇವೇಗೌಡ ಅವರು ತೀವ್ರ ಹರಿಹಾಯ್ದರು.

ಪದ್ಮನಾಭನಗರ ನಿವಾಸದಲ್ಲಿ ಮಾತನಾಡಿದ ಅವರು ನೂರು ಬಾರಿ ಸುಳ್ಳು ಹೇಳಿ ಜನತೆಗೆ ನಿಜ ಎಂದು ತೋರಿಸಲು ಹೊರಟಿದ್ದಾರೆ ಅಮಿತ್ ಷಾ ಮತ್ತು ಎಚ್ಡಿಕೆ ವಿಮಾನದಲ್ಲಿ ಭೇಟಿ ಬಗ್ಗೆಯ ನಕಲಿ ಟಿಕೆಟ್ ಹರಿದಾಡ್ತಿದೆ. ಇದು ಕೀಳು ಮಟ್ಟದ ರಾಜಕಾರಣ ಅಸಲಿ ಟಿಕೆಟ್ ಇದ್ದರೆ ಸಿಎಂ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದಲ್ಲದೆ ಇವರೂ ಕರಾಚಿಗೆ ಹೋದ ಟಿಕೆಟ್ ಇಲ್ವಾ ? ಎಂದು ಪ್ರಶ್ನಿಸಿದರು. ಬಿಜೆಪಿ ಜತೆ ಹೋಗುವ ಪ್ರಶ್ನೆ ಇಲ್ಲ ರಾಷ್ಟ್ರೀಯ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ನಾವು ಬಿಜೆಪಿ ಜೊತೆ ಹೋಗಲ್ಲ ಎಂದಿರುವುದು ನಿಜ. ಜೊತೆಗೆ ಬಿಜೆಪಿ ಜತೆ ಕುಮಾರಸ್ವಾಮಿ ಹೋಗೋದನ್ನು ಕೂಡ ನಾನು ಒಪ್ಪಲ್ಲ ಎಂದಿರುವುದು ನಿಜ. ಇದರಲ್ಲಿ ತಪ್ಪೇನಿದೆ? ನಾವು ಬಹುಮತ ಪಡೆದೇ ಸರಕಾರ ಮಾಡ್ತೀವಿ ಅಂತಾನೂ ಹೇಳಿದ್ದೇನೆ ಎಂದರು

ಹಾಸನಕ್ಕೆ ರಾಹುಲ್ ಗಾಂಧಿ ಬಂದಾಗ ಬಿಜೆಪಿಯ ಬಿ ಟೀಂ ಜೆಡಿಎಸ್ ಎಂದು ನಮ್ಮ ಮೇಲೆ ಆರೋಪ ಮಾರಿದರು. ಅವತ್ತಿನಿಂದ ಈ ರೀತಿಯ ಸುಳ್ಳು ಹೇಳಿಕೆಗಳನ್ನು ಸೃಷ್ಟಿ ಮಾಡಿಕೊಂಡು ಅತಿ ಕೀಳು ಮಟ್ಟದ ರಾಜಕಾರಣಕ್ಕೆ ಇವರು ಇಳಿದಿದ್ದಾರೆ ಎಂದರು. ಇದು ಕೀಳು ಮಟ್ಟದ ರಾಜಕಾರಣ : ವಿಮಾನದ ನಕಲಿ ಟಿಕೆಟ್ ಕೂಡ ಬಿಡುಗಡೆ ಮಾಡಿದ್ದಾರೆ ನಾಚಿಕೆ ಆಗಬೇಕು. ಸಿದ್ದರಾಮಯ್ಯ ಮತ್ತು ಜಮೀರ್ ಕರಾಚಿಗೆ ಹೋಗಿದ್ದಾರೆ ಎಂದು ಮಾಧ್ಯಮದಲ್ಲಿ ತೋರಿಸುತ್ತಿದ್ದಾರೆ ಯಾವುದನ್ನ ನಂಬುವುದು ಯಾವುದನ್ನ ಬಿಡೋದು. ಕಾಂಗ್ರೆಸ್ ನವರು ಅತ್ಯಂತ ಕೀಳು ಮಟ್ಟದ ರಾಜಕರಣ ಮಾಡುತ್ತಿದ್ದಾರೆ. ಇಂದು ಸುಳ್ಳನ್ನು ನೂರು ಬಾರಿ ಸತ್ಯ ಮಾಡಲು ಹೊರಟಿದ್ದಾರೆ.

ಅಮಿತ್ ಷಾ- ಹೆಚ್’ಡಿಕೆ ಭೇಟಿ ಆಗಿದ್ರೆ. ಸಿಎಂ ಬಳಿ ದಾಖಲೆ ಇದ್ರೆ ಬಿಡುಗಡೆ ಮಾಡಲಿ. ಅದನ್ನ ಬಿಟ್ಟು ಆರೋಪ ಮಾಡೋದು ಏಕೆ. ಬೆಳಿಗ್ಗೆಯಿಂದ ಸಂಜೆಯವರೆಗೂ ಅದನ್ನೇ ಹೇಳೋದು ಏಕೆ? ಸೋಲುವ ಭೀತಿಯಿಂದ ಸಿದ್ದರಾಮಯ್ಯ ಒಬ್ಬರೆ ಬೆಳಿಗ್ಗೆಯಿದ ಸಂಜೆವರೆಗೂ ಹೇಳುತ್ತಿದ್ದಾರೆ. ಖರ್ಗೆ ಅವರು ಈ ಬಗ್ಗೆ ಏನಾದ್ರೂ ಹೇಳುತ್ತಿದ್ದಾರಾ ಎಂದು ಹೇಳಿದರು. ಇದಕ್ಕಿಂತ ಬೇರೇನು ಹೇಳಬೇಕು ಹೇಳಿ, ಬಿಜೆಪಿ ಜೊತೆ ನಾನು ಹೋಗುವುದಿಲ್ಲ. ಬಹುಮತ ಬಾರದೆ ಇದ್ದರೆ ವಿಪಕ್ಷದಲ್ಲಿ ಕೂರಲು ಸಿದ್ದರಿದ್ದೀವಿ. ಅತಂತ್ರ ಚುನಾವಣಾ ಫಲಿತಾಂಶ ಬಂದ್ರೆ ಪ್ರತಿಪಕ್ಷ ಸ್ಥಾನದಲ್ಲಿ ಕೂರುತ್ತೇವೆ ಇದನ್ನ ಸಾಕಷ್ಟು ಬಾರಿ ನಾನು ಹೇಳಿದ್ದೀನಿ. ಕಾಂಗ್ರೆಸ್ ಗೆ ಬಹುಮತ ಬಂದಿಲ್ಲ ಅಂದ್ರೆ ಏನ್ ಮಾಡ್ತಾರೆ ಮೊದಲು ಅವರು ಹೇಳಲಿ ಆಗ ಈ ಬಗ್ಗೆ ಉತ್ತರ ಕೊಡುತ್ತೇನೆ ಎಂದು ತಿರುಗೇಟು ನೀಡಿದರು.

ಸಿದ್ದರಾಮಯ್ಯ ಆಡ್ವಾನಿ ಮನೆಗೆ ಹೋಗಿದ್ದು ನನಗೆ ಗೊತ್ತು ಆಗ ಸೋನಿಯಾಗಾಂಧಿ ಎಚ್ಚೆತ್ತುಕೊಂಡ್ರು. ಖರ್ಗೆ ಬದಲು ಸಿದ್ದರಾಮಯ್ಯ ಅವರನ್ನ ವಿಪಕ್ಷ ನಾಯಕನ ಸ್ಥಾನದಲ್ಲಿ ಕೂರಿಸಿದ್ರು ಇದೆಲ್ಲ ನನಗೆ ಗೊತ್ತಿದೆ ಆದ್ರೆ ನಾನು ಮಾತಾಡಿರಲಿಲ್ಲ ಅಷ್ಟೆ. ಅದರ ಅಗತ್ಯವೂ ಇಲ್ಲಾ ಎಂದು ದೇವೇಗೌಡರು ತಿಳಿಸಿದರು. ಸಿಎಂ ಏನೇ ಸುಳ್ಳು ಹೇಳಿದರು ಈ ಬಾರಿ ರಾಜ್ಯದ ಜನತೆ ನಮ್ಮ ನೆಲ ಜಲ ಭಾಷೆ ಉಳಿಸಲು ಮತ್ತು ರಾಜ್ಯದ ಸಮಗ್ರ ಅಭಿವೃದ್ದಿಗಾಗಿ ಹಾಗೂ ರೈತರ ನೆಮ್ಮದಿ ಜೀವನಕೋಸ್ಕರ ಜೆಡಿಎಸ್ ಪಕ್ಷಕ್ಕೆ ಸಂಪೂರ್ಣ ಆಶಿರ್ವಾದ ಮಾಡಲಿದ್ದಾರೆ ಎಂದು ಮಾಜಿ ಪ್ರಧಾನಿ ಹೇಳಿದರು.

Facebook Comments