ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (02-05-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  :  ವಿಷಯ ಸುಖಗಳು ಮೇಘಮಂಡಲದ ಮಧ್ಯದಲ್ಲಿ ಪ್ರಕಾಶಿಸುವ ಮಿಂಚಿನ ಹಾಗೆ ಚಂಚಲ, ಆಯಸ್ಸು ಗಾಳಿಯಿಂದ ಚದುರಿಸಲ್ಪಟ್ಟ ಮೋಡಗಳ ಸಮೂಹದಲ್ಲಡಗಿರುವ ನೀರಿನಂತೆ ಅಸ್ಥಿರ. ಮಾನವರಿಗೆ ಯೌವನ ಲಾಲಸೆಯೂ ಚಂಚಲ ಎಂದು ಬೇಗ ಅರಿತುಕೊಂಡು ಪಂಡಿತರೆ, ಯೋಗದಲ್ಲಿ ಧೈರ್ಯದಿಂದ ಮನಸ್ಸನ್ನು ಇಡಿರಿ. – ವೈರಾಗ್ಯಶತಕ

Rashi

ಪಂಚಾಂಗ : 02.05.2018 ಬುಧವಾರ

ಸೂರ್ಯ ಉದಯ ಬೆ.05.59 / ಸೂರ್ಯ ಅಸ್ತ ಸಂ.06.35
ಚಂದ್ರ ಉದಯ ರಾ.08.41 / ಚಂದ್ರ ಅಸ್ತ ರಾ.07.42
ವಿಲಂಬಿ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ
ಕೃಷ್ಣ ಪಕ್ಷ / ತಿಥಿ : ದ್ವಿತೀಯಾ (ಬೆ.07.40)
ನಕ್ಷತ್ರ: ಅನೂರಾಧ (ಸಾ.05.38) / ಯೋಗ: ವರೀಯಾನ್ (ಬೆ.09.22)
ಕರಣ: ಗರಜೆ-ವಣಿಜ್ (ಬೆ.07.40-ರಾ.08.19) / ಮಳೆ ನಕ್ಷತ್ರ: ಅಶ್ವಿನಿ
ಮಾಸ: ಮೇಷ / ತೇದಿ: 19

ದಿನದ ವಿಶೇಷ: 

ರಾಶಿ ಭವಿಷ್ಯ  :  

ಮೇಷ : ಅಪರಿಚಿತರೊಡನೆ ಯಾವುದೇ ವ್ಯವ ಹಾರ ಮಾಡದಿರಿ, ಶತ್ರುಗಳಿಂದ ಅಪಾಯವಿದೆ
ವೃಷಭ : ಅತಿಥಿಗಳ ಆಗಮನದಿಂದ ಕುಟುಂಬ ದಲ್ಲಿ ಕಲಹ, ಮನಸ್ತಾಪವಾಗುವ ಸಾಧ್ಯತೆಗಳಿವೆ
ಮಿಥುನ: ಅಲಂಕಾರಿಕ ಮತ್ತು ಬೆಲೆಬಾಳುವ ವಸ್ತುಗಳ ಖರೀದಿಯಿಂದ ಹಣ ವ್ಯಯವಾಗಲಿದೆ
ಕಟಕ : ದಾನ-ಧರ್ಮಗಳನ್ನು ಹೇರಳವಾಗಿ ಮಾಡುವಿರಿ
ಸಿಂಹ: ಸಂಗಾತಿಯ ಅನಾರೋಗ್ಯದಿಂದ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ
ಕನ್ಯಾ: ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಹೋಗುವ ಸಾಧ್ಯತೆಗಳಿವೆ
ತುಲಾ: ಸನ್ಮಾನ ಸಮಾರಂಭ ಗಳಲ್ಲಿ ಭಾಗವಹಿಸುವಿರಿ
ವೃಶ್ಚಿಕ: ಕೆಲವರು ಅಧಿಕಾರ ಕಳೆದುಕೊಳ್ಳುವ ಸಂಭವವಿರುತ್ತದೆ, ಅಹಿತಕರ ವಾತಾವರಣ
ಧನುಸ್ಸು: ಬಂಧುಗಳಿಂದ ತೊಂದರೆಯಾಗಲಿದೆ
ಮಕರ: ಆಪ್ತಮಿತ್ರರು ಅಪಮಾನ ಮಾಡುವರು
ಕುಂಭ: ರಾಜಕೀಯದಿಂದ ದೂರವಿರುವುದು ಉತ್ತಮ
ಮೀನ: ಹಣಕಾಸಿನ ಮುಗ್ಗಟ್ಟು ಉಂಟಾಗಲಿದೆ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments

Sri Raghav

Admin