ಕಾವೇರಿ ಸ್ಕೀಮ್ ರಚನೆಗೆ ಕಾಲಾವಕಾಶ ಕೇಳಿದ ಕೇಂದ್ರ

ಈ ಸುದ್ದಿಯನ್ನು ಶೇರ್ ಮಾಡಿ

Kaveri-Cauvery
ನವದೆಹಲಿ, ಮೇ 2- ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಸುಪ್ರೀಂಕೋರ್ಟ್ ತೀರ್ಪಿನನ್ವಯ ಸ್ಕೀಂ ರಚನೆಗೆ ಇನ್ನು ಎರಡು ವಾರಗಳ ಕಾಲ ಸಮಯಾವಕಾಶ ನೀಡುವಂತೆ ಕೇಂದ್ರ ಸರ್ಕಾರ ಸುಪ್ರೀಂಗೆ ಮನವಿ ಮಾಡಿದೆ. ಸುಪ್ರೀಂಕೋರ್ಟ್ ನದಿ ನೀರು ನಿರ್ವಹಣೆಗೆ ಸೂಕ್ತ ಯೋಜನೆಯ ಕರಡು ಸಲ್ಲಿಸಲು ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಸಮಯಾವಕಾಶ ನೀಡುವಂತೆ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‍ಗೆ ಕೋರಿಕೆ ಸಲ್ಲಿಸಿದೆ. ತಮಿಳುನಾಡು, ಕೇರಳ ಹಾಗೂ ಕರ್ನಾಟಕ ನಡುವಿನ ಕಾವೇರಿ ನದಿ ನೀರು ಹಂಚಿಕೆ ವಿವಾದ ಬಗೆಹರಿಸಲು ಕಾವೇರಿ  ನಿರ್ವಹಣಾ ಮಂಡಳಿ ರಚನೆಗೆ ಆರು ವಾರಗಳಲ್ಲಿ ಕರಡು ಸಿದ್ಧಪಡಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು. ಆ ಗಡುವು ಮುಗಿದ ಹಿನ್ನೆಲೆಯಲ್ಲಿ ಇಂದು ನ್ಯಾಯಾಲಯದ ಮುಂದೆ ಸಮಾಯಾವಕಾಶ ಕೋರಿ ಕೇಂದ್ರ ಮನವಿ ಸಲ್ಲಿಸಿದೆ.

Facebook Comments

Sri Raghav

Admin