ಮೊಬೈಲ್ ಗ್ರಾಹಕರಿಗೆ ಕೇಂದ್ರದಿಂದ ಶುಭ ಸುದ್ದಿ : ಸಿಮ್ ಪಡೆಯಲು ಆಧಾರ್ ಕಡ್ಡಾಯವಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

adhar-simದಿಂ

ನವದೆಹಲಿ, ಮೇ 2-ಮೊಬೈಲ್ ಫೋನ್‍ಗಳಿಗೆ ಸಿಮ್ ಕಾರ್ಡ್ ಪಡೆಯಲು ಆಧಾರ್ ಕಡ್ಡಾಯವಲ್ಲ. ಡ್ರೈವಿಂಗ್ ಲೈಸನ್ಸ್(ಡಿಎಲ್), ಮತದಾರರ ಗುರುತಿನ ಚೀಟಿ, ಪಾಸ್‍ರ್ಪೋರ್ಟ್ ಮತ್ತಿತರ ದಾಖಲೆಗಳನ್ನು ನೀಡಿ ಸಿಮ್ ಪಡೆಯಬಹುದು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಮೊಬೈಲ್ ಕಂಪನಿಗಳು ಗ್ರಾಹಕರಿಗೆ ತೊಂದರೆಯಾಗದಂತೆ ಸರ್ಕಾರದ ಸೂಚನೆ ಮತ್ತು ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ದೂರಸಂಪರ್ಕ ಇಲಾಖೆ ಕಾರ್ಯದರ್ಶಿ ಸುಂದರ್‍ರಾಜನ್ ತಿಳಿಸಿದ್ದಾರೆ.

ಆಧಾರ್‍ಗೆ ಸಂಬಂಧಪಟ್ಟಂತೆ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳುವ ತನಕ, ಮೊಬೈಲ್ ಫೋನ್‍ಗಳಿಗೆ ಸಿಮ್ ಪಡೆಯಲು ಆಧಾರ್ ಕಡ್ಡಾಯವಲ್ಲ ಎಂದು ಸುಪ್ರೀಂಕೋರ್ಟ್ ಈಗಾಗಲೇ ಸ್ಪಷ್ಟಪಡಿಸಿ ನಿರ್ದೇಶನ ನೀಡಿದೆ. ಆದರೂ, ಮೊಬೈಲ್ ಕಂಪನಿಗಳು ಆಧಾರ್ ನೀಡದವರಿಗೆ ಸಿಮ್ ನಿರಾಕರಿಸಿರುವ ವಿಚಾರವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಈ ಸಂಬಂಧ ಮತ್ತೊಮ್ಮೆ ಸ್ಪಷ್ಟನೆ ಮೂಲಕ ಪುನರುಚ್ಚರಿಸಿದೆ.

Facebook Comments

Sri Raghav

Admin