ಚಾಕು ಸಹಿತ ಲೋಕಾಯುಕ್ತರ ಕಚೇರಿಗೆ ಬಂದ ಮಹಿಳೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 3- ಹಾಡಹಗಲೇ ಲೋಕಾಯುಕ್ತರ ಕಚೇರಿಗೆ ಬಂದು ಲೋಕಾಯುಕ್ತರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದ ಘಟನೆ ಮಾಸುವ ಮುನ್ನವೇ ಇಂದು ಮಹಿಳೆಯೊಬ್ಬರು ಬ್ಯಾಗ್‍ನಲ್ಲಿ ಚಾಕು ಇಟ್ಟುಕೊಂಡು ಬಂದಿದ್ದು, ತಪಾಸಣೆ ವೇಳೆ ಸಿಕ್ಕಿ ಬಿದ್ದಿದ್ದಾರೆ. ಇಂದು ಮಧ್ಯಾಹ್ನ ಲೋಕಾಯುಕ್ತ ಕಚೇರಿಗೆ ಬಂದ ಮಹಿಳೆ ನನ್ನ ಹೆಸರು ಸೋನಿಯಾರಾಣಿ, ದೂರು ಕೊಡಲು ಬಂದಿದ್ದೇನೆ ಎಂದು ಸಿಬ್ಬಂದಿಗೆ ತಿಳಿಸಿದ್ದಾರೆ.

Lokayukta-001

ಈ ವೇಳೆ ಸಿಬ್ಬಂದಿ ತಪಾಸಣೆ ಮಾಡುವಾಗ ಮಹಿಳೆ ತಂದಿದ್ದ ಬ್ಯಾಗ್‍ನಲ್ಲಿದ್ದ ಫೈಲ್‍ನೊಂದಿಗೆ ಚಾಕು ಇರುವುದು ಕಂಡು ಬಂದಿದೆ. ತಕ್ಷಣ ಮಹಿಳೆಯನ್ನು ವಶಕ್ಕೆ ತೆಗೆದುಕೊಂಡ ಲೋಕಾಯುಕ್ತ ಕಚೇರಿ ಸಿಬ್ಬಂದಿ ವಿಧಾನಸೌಧ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಚಾಕುವನ್ನು ಬ್ಯಾಗ್‍ನಲ್ಲಿ ಏಕೆ ತಂದಿದ್ದೀರಿ ಎಂಬುದರ ಬಗ್ಗೆ ವಿಧಾನಸೌಧ ಠಾಣೆ ಪೊಲೀಸರು ಮಹಿಳೆಯನ್ನು ವಿಚಾರಣೆ ನಡೆಸುತ್ತಿದ್ದಾರೆ.

Facebook Comments

Sri Raghav

Admin