ನಿಂತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದು ಬಂಗಾರಪೇಟೆಯ ತಹಸೀಲ್ದಾರ್ ಸ್ಥಳದಲ್ಲೇ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Accident--01

ಬೆಂಗಳೂರು, ಮೇ 3- ರಸ್ತೆ ಬದಿ ನಿಂತಿದ್ದ ಕಾರಿಗೆ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿದ್ದ ಬಂಗಾರಪೇಟೆಯ ತಹಸೀಲ್ದಾರ್ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕಳೆದ ರಾತ್ರಿ ಹೆಬ್ಬಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ವಾಪಸ್ ಬಂಗಾರಪೇಟೆಗೆ ತೆರಳುವಾಗ ಹೆಬ್ಬಾಳ ಬಳಿಯ ಭದ್ರಪ್ಪ ಲೇಔಟ್ ಬಳಿ ಕಾರು ನಿಲ್ಲಿಸಿದ ಚಾಲಕ ಏನೋ ವಸ್ತು ತರಲು ಹೋಗಿದ್ದಾರೆ.

ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಲಾರಿ ಇವರ ಕಾರಿಗೆ ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡ ತಹಸೀಲ್ದಾರ್ ಎಂ.ಎಸ್.ಸತ್ಯಪ್ರಕಾಶ್ ಸ್ಥಳದಲ್ಲೇ ಅಸುನೀಗಿದ್ದಾರೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ದಾವಿಸಿದ ಪೊಲೀಸರು ಆರಂಭದಲ್ಲಿ ಮೃತಪಟ್ಟವರು ಯಾರು ಎಂಬುದು ತಿಳಿಯಲಿಲ್ಲ. ನಂತರ ಕಾರಿನ ಚಾಲಕ ಮಾಹಿತಿ ನೀಡಿದ ನಂತರ ಮೃತಪಟ್ಟವರು ತಹಸೀಲ್ದಾರ್ ಸತ್ಯಪ್ರಕಾಶ್ ಎಂದು ತಿಳಿದುಬಂದಿದೆ. ಅಪಘಾತವೆಸಗಿ ಪರಾರಿಯಾಗಿರುವ ಚಾಲಕನ ಪತ್ತೆ ಕಾರ್ಯ ನಡೆಯುತ್ತಿದೆ.  ಚುನಾವಣೆ ಸಂದರ್ಭದಲ್ಲಿ ಈ ಘಟನೆ ನಡೆದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

Facebook Comments

Sri Raghav

Admin