ಅಕಾಡೆಮಿಯಲ್ಲಿ ಲೈಂಗಿಕ ಹಗರಣ ಹಿನ್ನೆಲೆಯಲ್ಲಿ ನೊಬೆಲ್ ಸಾಹಿತ್ಯ ಪ್ರಶಸ್ತಿ ಮುಂದೂಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Nobel--01

ಕೊಪೆನ್‍ಹಗೆನ್, ಮೇ 4-ಪ್ರಶಸ್ತಿ ಅಕಾಡೆಮಿಯಲ್ಲಿ ಲೈಂಗಿಕ ಕಿರುಕುಳ ಮತ್ತು ಆರ್ಥಿಕ ಅಪರಾಧಗಳ ಹಿನ್ನೆಲೆಯಲ್ಲಿ ಈ ವರ್ಷದ ಪ್ರತಿಷ್ಠಿತ ನೊಬೆಲ್ ಸಾಹಿತ್ಯ ಪುರಸ್ಕಾರ ನೀಡುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ. 2018ರ ಸಾಲಿನ ನೊಬೆಲ್ ಸಾಹಿತಿ ಪ್ರಶಸ್ತಿಯನ್ನು ಮುಂದೂಡಲಾಗಿದೆ. ಅದನ್ನು 2019ರಲ್ಲಿ ನೀಡಲಾಗುವುದು. ಸ್ವೀಡನ್ ರಾಜಧಾನಿ ಸ್ಟಾಕ್‍ಹೋಮ್‍ನಲ್ಲಿ ನಡೆದ ವಾರದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸ್ವೀಡಿಷ್ ಅಕಾಡೆಮಿ ಪ್ರಕಟಣೆಯಲ್ಲಿ ಹೇಳಿದೆ.  ಅಕಾಡೆಮಿಯ ಉನ್ನತಾಧಿಕಾರಿಗಳ ವಿರುದ್ಧ ಲೈಂಗಿಕ ದುರಾಚಾರ ಆರೋಪಗಳು ಹಾಗೂ ಆರ್ಥಿಕ ಅಪರಾಧಗಳ ಹಗರಣಗಳು ಬೆಳಕಿಗೆ ಬಂದು ಸಂಸ್ಥೆಯ ಹೆಸರಿಗೆ ಕಳಂಕ ಬಂದಿದೆ. ಈ ಹಿನ್ನೆಲೆಯಲ್ಲಿ ನೊಬೆಲ್ ಸಾಹಿತ್ಯ ಪ್ರಶಸ್ತಿಯನ್ನು ಮುಂದೂಡಲಾಗಿದೆ ಎಂದು ತಿಳಿಸಲಾಗಿದೆ.

Facebook Comments

Sri Raghav

Admin