ಎನ್‍ಕೌಂಟರ್ ನಲ್ಲಿ ನಕ್ಸಲ್ ಮುಖಂಡನ ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Naxals-01
ರಾಯ್‍ಪುರ, ಮೇ 4-ಛತ್ತೀಸ್‍ಗಢದ ಸುಕ್ಮಾ ಜಿಲ್ಲೆಯಲ್ಲಿ ಭದ್ರತಾಪಡೆಗಳಿಂದ ನಕ್ಸಲ್ ನಿಗ್ರಹ ಕಾರ್ಯಾಚರಣೆ ಮತ್ತಷ್ಟು ತೀವ್ರಗೊಂಡಿದೆ. ಪೊಲೀಸರೊಂದಿಗೆ ನಡೆದ ಎನ್‍ಕೌಂಟರ್‍ನಲ್ಲಿ ಮಾವೋವಾದಿ ನಾಯಕನೊಬ್ಬ ಬಲಿಯಾಗಿದ್ದಾನೆ. ಆತನ ತಲೆಗೆ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಸೋಯಂ ಕಮ ಪೊಲೀಸರ ಗುಂಡಿಗೆ ಬಲಿಯಾದ ನಕ್ಸಲ್ ನಾಯಕ. ಈ ಪ್ರದೇಶದಲ್ಲಿ ನಡೆದ ನಕ್ಸರ ದಾಳಿಯಲ್ಲಿ ಸೋಯಂ ಸಕ್ರಿಯವಾಗಿ ಭಾಗವಹಿಸಿದ್ದ. ಕೋಟಂ ಪ್ರದೇಶ ಸಮಿತಿ ಹೆಸರಿನ ನಕ್ಸಲ್ ಸಂಘಟನೆಯ ಮುಖ್ಯ ಸದಸ್ಯರಲ್ಲಿ ಒಬ್ಬನಾಗಿದ್ದ ಈತನ ತಲೆಗೆ ಪೊಲೀಸರು 5 ಲಕ್ಷ ರೂ. ಬಹುಮಾನ ಘೋಷಿಸಿದ್ದರು. ಹತ ನಕ್ಸಲ್ ಮುಖಂಡನ ಬಳಿ ಇದ್ದ ಪಿಸ್ತೂಲು, ಸ್ಫೋಟಕಗಳು ಹಾಗೂ ಮತ್ತಿತ್ತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Facebook Comments

Sri Raghav

Admin