ಕಾಂಗ್ರೆಸ್, ಬಿಜೆಪಿಯಿಂದ ಜನರಿಗೆ ಟೋಪಿ : ಮೋದಿ, ಸಿದ್ದರಾಮಯ್ಯ ವಿರುದ್ಧ ಹೆಚ್‍ಡಿಕೆ ವಾಗ್ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

ರಾಯಚೂರು. ಮೇ.04 : ಸರಕಾರ ಶುದ್ಧ ಕುಡಿಯುವ ನೀರು, ವಿದ್ಯುತ್ ನೀಡುವಲ್ಲಿ ವಿಫಲವಾಗಿದ್ದು, ಕಾಂಗ್ರೆಸ್‍ನ ಸಿದ್ದರಾಮಯ್ಯ ಸರಕಾರ ರೈತರ ನೆರವಿಗೆ ಬಂದಿಲ್ಲ. ಕೇಂದ್ರದ ನರೇಂದ್ರ ಮೋದಿಯವರು ನಾನು ಕನ್ನಡಿಗ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಇಲ್ಲಿನ ಸಮಸ್ಯೆಗಳ ಬಗ್ಗೆ ಅರಿವಿಲ್ಲ ಎಂದು ಸಿದ್ಧರಾಮಯ್ಯ ಮತ್ತು ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ದೇವದುರ್ಗ, ಗ್ರಾಮಾಂತರದ ಗಿಲ್ಲೇಸುಗೂರು ಗ್ರಾಮದಲ್ಲಿ ಏರ್ಪಡಿಸಿದ್ದ ವಿಕಾಸಪರ್ವ ಸಮಾವೇಶದಲ್ಲಿ ಗ್ರಾಮೀಣ ಅಭ್ಯರ್ಥಿ ರವಿ ಪಾಟೀಲ್ ಪರ ಪ್ರಚಾರ ನಡೆಸಿ ಮಾತನಾಡಿದರು. ಕಾಂಗ್ರೆಸ್, ಬಿಜೆಪಿ ಪಕ್ಷಗಳು ಜನರಿಗೆ ಟೋಪಿ ಹಾಕಲು ಬಂದಿವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ರಾಷ್ಟ್ರೀಯ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Kumarasamy--01

ಪ್ರಧಾನಿ ನರೇಂದ್ರ ಮೋದಿಯವರು ಜೆಡಿಎಸ್‍ಗೆ ಮತ ನೀಡಬೇಡಿ ಎಂದು ಹೇಳುತ್ತಿದ್ದಾರೆ. ಹೀಗೆ ಹೇಳಲು ದೆಹಲಿಯಿಂದ ಇಲ್ಲಿಗೆ ಬರಬೇಕಾಯಿತೇ ಎಂದು ಪ್ರಶ್ನಿಸಿದರು. ಒಂದು ಪಕ್ಷದ ಅಭಿಪ್ರಾಯ ತಿಳಿಸಲು ಬರುವ ಬದಲು ಜನರ ಸಮಸ್ಯೆಗಳನ್ನು ಬಗೆಹರಿಸಲು ಪ್ರಧಾನಿಯವರು ಮುಂದಾಗಲಿ, ಯಡಿಯೂರಪ್ಪ ಮೇ.17 ಕ್ಕೆ ರಾಜ್ಯದ ಮುಖ್ಯಮಂತ್ರಿಯಾಗುತ್ತೀನಿ ಎಂದು ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ ಎಂದು ಹರಿಹಾಯ್ದರು.

ಕಾಂಗ್ರೆಸ್, ಬಿಜೆಪಿಯವರು ಜೆಡಿಎಸ್‍ಗೆ ಮತ ಹಾಕಬೇಡಿ ಎಂದು ಹೇಳುವುದು ಜನರ ಅಭಿಪ್ರಾಯವೇ ತಿಳಿಸಲು ಇವರೇನು ಮತದಾರರೇ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಾತ್ಯಾತೀತ ಜನತಾದಳ ವೆಂದರೆ ಜನರ ಸರಕಾರ. ಒಂದು ಬಾರಿ ಜೆಡಿಎಸ್‍ಗೆ ಅಧಿಕಾರ ನೀಡಿ ಎಂದು ಮನವಿ ಮಾಡಿದರು.

ಅಧಿಕಾರ ಪಡೆದ ತಕ್ಷಣ ರೈತರ ಸಾಲಮನ್ನಾ, ಗರ್ಭೀಣೀಯರಿಗೆ 6 ಸಾವಿರ ರೂ ಸಹಾಯಹಸ್ತಾ, ಕರ್ನಾಟಕ ಯುವಕ-ಯುವತಿಯರಿಗೆ 1 ಕೋಟಿ ಉದ್ಯೋಗ ಸೃಷ್ಟಿ, ಪದವೀಧರರಿಗೆ 1 ವರ್ಷ ಉಚಿತ ಬಸ್‍ಪಾಸ್, ವೃದ್ಧರಿಗೆ 5 ಸಾವಿರ ರೂ. ಗೌರವ ಧನ, ಸ್ತ್ರೀ ಶಕ್ತಿ ಸಂಘಗಳಿಗೆ ಸಂಪೂರ್ಣ ಸಾಲಮನ್ನಾ ಸೇರಿದಂತೆ ಅನೇಕ ಸವಲತ್ತುಗಳನ್ನು ಅಧಿಕಾರ ಪಡೆದ 24 ಗಂಟೆಯೊಳಗೆ ನೀಡುತ್ತೇವೆ ಎಂದು ಭರವಸೆ ನೀಡಿದರು.

ಮುಖ್ಯಮಂತ್ರಿ ಆಗುವ ಆಸೆ ನನಲ್ಲಿಲ್ಲ, ರೈತಪರ ಆಡಳಿತ ನಡೆಸಿ ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಸಂಬಂಧ ಅಧಿಕಾರ ಕೇಳುತ್ತಿದ್ದೇನೆ ಎಂದು ನೆರದಿದ್ದ ಸಾವಿರಾರು ಜನರಲ್ಲಿ ಮನವಿ ಮಾಡಿದರು. ರಾಯಚೂರು ಗ್ರಾಮಾಂತರದ ಗಿಲ್ಲೇಸೂಗೂರು ಹಮ್ಮಿಕೊಂಡಿದ್ದ ಬೃಹತ್ ಸಮಾವೇಶವು ಜೆಡಿಎಸ್ ಗೆಲುವಿನ ಸೂಚನೆಯಾಗಿದೆ. ರೈತರಿಗೆ ಹೊಸ ಕೃಷಿ ನೀತಿ ಜಾರಿಗೆ ತಂದು ಯಾವುದೇ ಬೆಳೆ ಬೆಳೆದರೂ ರೈತರು ಸ್ವಾಭಿಮಾನಿಯಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು. ನನ್ನ ಆರೋಗ್ಯದ ಸ್ಥಿತಿ ಸರಿಯಿಲ್ಲ. ಆದರೆ, ರೈತರು ಆತ್ಮಹತ್ಯೆ ನಿಲ್ಲಿಸಬೇಕೆಂಬ ಏಕಾಂಗಿ ಹೋರಾಟ ನನದ್ದಾಗಿದೆ ಎಂದರು.

ರಾಯಚೂರು ಜಿಲ್ಲೆಯ ಹಲವಾರು ಸಮಸ್ಯೆಗಳು ನನ್ನ ಗಮನಕ್ಕೆ ಬಂದಿದ್ದು, ಪ್ಲೋರೈಡ್ ಮಿಶ್ರಿತ ನೀರನ್ನು ಕುಡಿಯುತ್ತಿದ್ದೀರಿ ಎಂಬುವುದು ನನ್ನ ಗಮನಕ್ಕಿದೆ, ಜಿಲ್ಲೆಗೆ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತೇನೆ ಎಂದು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅಭ್ಯರ್ಥಿ ರವಿಪಾಟೀಲ್, ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಕಾಂತ ಗಾಣಧಾಳ, ನಿಜಾಮುದ್ದೀನ್, ಹರೀಶ್ ನಾಡಗೌಡ ಸೇರಿದಂತೆ ಅನೇಕ ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin