ಜೆಡಿಎಸ್ ಪರ ಕಿಚ್ಚ ಸುದೀಪ್, ಪವನ್‍ಕಲ್ಯಾಣ್ ಪ್ರಚಾರ

ಈ ಸುದ್ದಿಯನ್ನು ಶೇರ್ ಮಾಡಿ

Sudeep--01
ಬೆಂಗಳೂರು, ಮೇ 4- ಚುನಾವಣಾ ಪ್ರಚಾರದಲ್ಲಿ ತಾರಾ ಪ್ರಚಾರಕರನ್ನು ಬಳಸಿಕೊಳ್ಳಲು ಮುಂದಾಗಿರುವ ಜೆಡಿಎಸ್ ದಕ್ಷಿಣ ಭಾರತದ ಪ್ರಖ್ಯಾತ ನಟ, ನಟಿಯರನ್ನು ಪ್ರಚಾರಕ್ಕಾಗಿ ಕರೆತರುತ್ತಿದೆ. ದಕ್ಷಿಣ ಭಾರತದ ನಟ ಪವರ್‍ಸ್ಟಾರ್ ಪವನ್‍ಕಲ್ಯಾಣ್, ಕನ್ನಡ ಚಿತ್ರರಂಗದ ಕಿಚ್ಚ ಸುದೀಪ್, ಪೂಜಾಗಾಂಧಿ, ಅಮೂಲ್ಯ, ಡಾ.ಸೂರಜ್ ರೇವಣ್ಣ ಅವರನ್ನು ಪ್ರಚಾರಕ್ಕೆ ಕರೆತರಲು ಚುನಾವಣಾ ಆಯೋಗದಿಂದ ಅನುಮತಿ ಪಡೆಯಲಾಗಿದೆ. ಈಗಾಗಲೇ ಜೆಡಿಎಸ್‍ನೊಂದಿಗೆ ಮೈತ್ರಿಮಾಡಿಕೊಂಡಿರುವ ಬಿಎಸ್‍ಪಿಯ ಮಾಯಾವತಿ, ಅಸಾದುದ್ದೀನ್ ಓವೈಸಿ ಪ್ರಚಾರಕ್ಕೆ ಬರುತ್ತಿದ್ದು, ಇದರೊಂದಿಗೆ ಸ್ಟಾರ್ ನಟ-ನಟಿಯರು ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

Facebook Comments

Sri Raghav

Admin