ಬೆಂಗಳೂರಲ್ಲಿ ಯುವಕನ ರುಂಡ-ಮುಂಡ ಬೇರ್ಪಡಿಸಿ ಭೀಕರ ಕೊಲೆ..!

ಈ ಸುದ್ದಿಯನ್ನು ಶೇರ್ ಮಾಡಿ

Murde--01

ಬೆಂಗಳೂರು, ಮೇ 4- ಯುವಕನೊಬ್ಬನನ್ನು ಬೇರೆಡೆ ಕರೆದೊಯ್ದು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ರುಂಡ-ಮುಂಡ ಬೇರ್ಪಡಿಸಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಗಂಗಮ್ಮನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವಿದ್ಯಾರಣ್ಯಪುರ, ದೊಡ್ಡಬೊಮ್ಮಸಂದ್ರದ 4ನೇ ಕ್ರಾಸ್ ನಿವಾಸಿ ಡೇವಿಡ್(34) ಕೊಲೆಯಾದ ದುರ್ದೈವಿ.

ಡೇವಿಡ್ ಈ ಹಿಂದೆ ಆ್ಯಂಬುಲೆನ್ಸ್ ವಾಹನದ ಚಾಲಕ ವೃತ್ತಿ ಮಾಡುತ್ತಿದ್ದ. ಇತ್ತೀಚೆಗಷ್ಟೇ ಈ ವೃತ್ತಿ ತೊರೆದು ಕಾರು ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ. ರಾತ್ರಿ ಡೇವಿಡ್‍ನನ್ನು ದುಷ್ಕರ್ಮಿಗಳು ಗಂಗಮ್ಮನಗುಡಿ ವ್ಯಾಪ್ತಿಯ ರಾಮಚಂದ್ರಪುರ ಮುಖ್ಯರಸ್ತೆ ಬಳಿ ಕರೆದೊಯ್ದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ರುಂಡ-ಮುಂಡ ಬೇರ್ಪಡಿಸಿ ಭೀಕರವಾಗಿ ಕೊಲೆ ಮಾಡಿ ರುಂಡವನ್ನು ತೆಗೆದುಕೊಂಡು ಅರ್ಧ ಕಿ.ಮೀ ದೂರದ ಶಾಲೆ ಆವರಣದ ಧ್ವಜಸ್ತಂಭದ ಬಳಿ ಬಿಸಾಡಿ ಪರಾರಿಯಾಗಿದ್ದಾರೆ.

ರಾತ್ರಿ 10.45ರ ಸಮಯದಲ್ಲಿ ಸುದ್ದಿ ತಿಳಿದ ಗಂಗಮ್ಮನಗುಡಿ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ತಲೆ ಇಲ್ಲದ ದೇಹ ಮಾತ್ರ ಪತ್ತೆಯಾಯಿತು.ಈ ಸಂದರ್ಭದಲ್ಲಿ ಮಳೆ ಬರುತ್ತಿತ್ತು. ಪೊಲೀಸರು ಸುತ್ತ ಮುತ್ತ ರುಂಡಕ್ಕಾಗಿ ಹುಡುಕಾಟ ನಡೆಸಿದರೂ ಪತ್ತೆಯಾಗಲಿಲ್ಲ. ಇಂದು ಮುಂಜಾನೆ ಶಾಲೆಯೊಂದರ ಬಳಿ ರುಂಡ ಪತ್ತೆಯಾಗಿದ್ದು, ತದನಂತರ ಕೊಲೆಯಾದ ಯುವಕ ಡೇವಿಡ್ ಎಂದು ಗುರುತಿಸಲಾಗಿದೆ.

ಈ ಯುವಕನನ್ನು ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.  ಡೇವಿಡ್ ಇತ್ತೀಚೆಗೆ ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಶವವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಸಂಬಂಧ ಗಂಗಮ್ಮನಗುಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೆಲವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin