ಯಶ್ ಎಲೆಕ್ಷನ್ ಪ್ರಚಾರಕ್ಕಿಳಿದಿದ್ದೇಕೆ ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

Yash--01
ಬೆಂಗಳೂರು, ಮೇ 4-ನಾನು ಸುಮ್ಮನೆ ಮತ ಕೇಳಲು ಬಂದಿಲ್ಲ. ಸಮಸ್ಯೆಗಳನ್ನು ಪರಿಹರಿಸಲು ನಾನು ಇಲ್ಲಿನ ಜನಪ್ರತಿನಿಧಿಗಳ ಜೊತೆ ಕೈಜೋಡಿಸುತ್ತೇನೆ ಎಂದು ನಟ ಯಶ್ ಭರವಸೆ ವ್ಯಕ್ತಪಡಿಸಿದರು. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಗಾರ್ಮೆಂಟ್ಸ್ ಉದ್ಯೋಗಿಗಳನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಯಾವುದೇ ಪಕ್ಷದ ಪರ ಪ್ರಚಾರಕನಲ್ಲ. ನಾನು ಸುಮ್ಮನೆ ಮತ ಕೇಳುವುದಿಲ್ಲ. ಸಮಸ್ಯೆ ಪರಿಹರಿಸಲು ನಾನು ಸ್ಥಳೀಯ ಜನಪ್ರತಿನಿಧಿಗಳಿಗೆ ಸಹಕರಿಸುತ್ತೇನೆ. ನಿಮ್ಮ ಸಮಸ್ಯೆ ಬಗೆಹರಿಸಲಿಲ್ಲ ಎಂದರೆ ನಾನು ಪ್ರತಿಪಕ್ಷವಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದು ಹೇಳಿದರು. ಸತೀಶ್‍ರೆಡ್ಡಿ ಜನಪರ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಅವರು ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ. ಅಂತಹವರಿಗೆ ಮತ ನೀಡಿ ಎಂದ ಅವರು, ನನ್ನ ಆತ್ಮೀಯ ಗೆಳೆಯರ ಪರ ಮಾತ್ರ ಮತ ಪ್ರಚಾರ ಮಾಡುತ್ತಿದ್ದೇನೆ ಎಂದು ನುಡಿದರು.

Facebook Comments

Sri Raghav

Admin