28 ಔಷಧಿಗಳ ಆಮದು ಸುಂಕ ಇಳಿಸಿ ಭಾರತದ ರಫ್ತಿಗೆ ಉತ್ತೇಜನ ನೀಡಿದ ಚೀನಾ

ಈ ಸುದ್ದಿಯನ್ನು ಶೇರ್ ಮಾಡಿ

Medicine--01

ನವದೆಹಲಿ, ಮೇ 4-ಎಲ್ಲ ಕ್ಯಾನ್ಸರ್ ಚಿಕಿತ್ಸಾ ಡ್ರಗ್ಸ್‍ಗಳೂ ಸೇರಿದಂತೆ 28 ಔಷಧಗಳ ಆಮದು ಸುಂಕವನ್ನು ಮೇ 1ರಿಂದ ತೆಗೆದು ಹಾಕಿರುವುದಾಗಿ ಚೀನಾ ಘೋಷಿಸಿದೆ. ಈ ಕ್ರಮದಿಂದಾಗಿ ತನ್ನ ನೆರೆ ರಾಷ್ಟ್ರಕ್ಕೆ ಈ ಔಷಧಿಗಳನ್ನು ರಫ್ತು ಮಾಡಲು ಭಾರತಕ್ಕೆ ದೊಡ್ಡ ಮಟ್ಟದಲ್ಲಿ ಉತ್ತೇಜನ ಲಭಿಸಿದಂತಾಗಿದೆ. ಮೇ 1ರಿಂದ ಒಟ್ಟು 28 ಔಷಧಿಗಳ ಮೇಲಿನ ಆಮದು ತೆರಿಗೆಗಳಿಗೆ ಚೀನಾ ವಿನಾಯಿತಿ ನೀಡಿದೆ.

ಇದು ಭಾರತದ ಔಷಧ ತಯಾರಿಕೆ ಉದ್ಯಮಕ್ಕೆ ಶುಭ ಸುದ್ದಿಯಾಗಿದೆ ಹಾಗೂ ಚೀನಾಕ್ಕೆ ಔಷಧಿಗಳನ್ನು ರಫ್ತು ಮಾಡಲು ಅನುಕೂಲವಾಗಿದೆ. ಇದು ಭವಿಷ್ಯದಲ್ಲಿ ಚೀನಾ ಮತ್ತು ಭಾರತದ ನಡುವೆ ವ್ಯಾಪಾರ ಅಸಮತೋಲನ ಕಡಿಮೆ ಮಾಡುವಲ್ಲಿ ಸಹಕಾರಿಯಾಗಲಿದೆ ಎಂದು ಭಾರತಕ್ಕೆ ಚೀನಾದ ರಾಯಭಾರಿಯಾಗಿರುವ ಲುವೋ ಜಾವೋಹುಯಿ ಟ್ವಿಟರ್‍ನಲ್ಲಿ ತಿಳಿಸಿದ್ದಾರೆ. ಮಾಹಿತಿ ತಂತ್ರಜ್ಞಾನ, ಔಷಧೋದ್ಯಮ ಹಾಗೂ ಕೃಷಿ ಸೇರಿದಂತೆ ಸರಕುಗಳು ಮತ್ತು ಸೇವೆಗಳಿಗಾಗಿ ತಮ್ಮ ಮಾರುಕಟ್ಟೆಯನ್ನು ಏಷ್ಯಾದಲ್ಲಿ ಮತ್ತಷ್ಟು ವಿಸ್ತರಿಸಲು ಇದು ನೆರವಾಗಲಿದೆ.

Facebook Comments

Sri Raghav

Admin