ಬಿಜೆಪಿ ಗೆಲುವಿಗಾಗಿ ಮೋದಿ ಬೆಂಬಲಿಗರ 1 ಲಕ್ಷ ತುಳಸಿ ನೈವೇದ್ಯ

ಈ ಸುದ್ದಿಯನ್ನು ಶೇರ್ ಮಾಡಿ

Modi--PM-05
ಉಡುಪಿ, ಮೇ 5- ಕರ್ನಾಟಕದಲ್ಲಿ ಬಿಜೆಪಿ ಗೆಲುವಿಗಾಗಿ ಪ್ರಧಾನಿ ನರೇಂದ್ರ ಮೋದಿ ಅಭಿಮಾನಿಗಳು ಉಡುಪಿಯ ವಿಶ್ವವಿಖ್ಯಾತ ಶ್ರೀಕೃಷ್ಣ ದೇಗುಲದಲ್ಲಿ 1 ಲಕ್ಷ ತುಳಸಿ ನೈವೇದ್ಯ ಮಾಡುತ್ತಿದ್ದಾರೆ. 55 ವರ್ಷದ ಭಕ್ತ ಕೇಶವಾಚಾರ್ಯ ಎಂಬುವವರು 22 ಕಿಮೀ ದೂರದ ಶಿದೂರಿನಿಂದ ಪ್ರತಿದಿನ ಉಡುಪಿಗೆ ಬಂದು 800 ವರ್ಷಗಳ ಪ್ರಾಚೀನ ದೇವಾಲಯಕ್ಕೆ ತುಳಸಿ ದಳಗಳನ್ನು ನೈವೇದ್ಯವಾಗಿ ಸಮರ್ಪಿಸುತ್ತಿದ್ದಾರೆ. ಮೋದಿ ನೇತೃತ್ವದ ಬಿಜೆಪಿ ಮತ್ತು ಆ ಪಕ್ಷದ ಅಭ್ಯರ್ಥಿಗಳು ಮೇ 12ರ ವಿಧಾನಸಭೆ ಚುನಾವಣೆಗಳಲ್ಲಿ ಜಯ ಸಾಧಿಸಬೇಕೆಂಬುದು ಅವರ ಈ ವಿಶೇಷ ಅರ್ಚನೆಯ ಉದ್ದೇಶ. ಒಂದು ಲಕ್ಷ ತುಳಸಿ ದಳಗಳನ್ನು ಶ್ರೀಕೃಷ್ಣನಿಗೆ ನೈವೇದ್ಯ ಮಾಡಿದರೆ, ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬ ನಂಬಿಕೆ ಉಡುಪಿಯಲ್ಲಿದೆ.

Facebook Comments

Sri Raghav

Admin