ಮಕ್ಕಳೂ ಸೇರಿ ನಾಲ್ವರು ಸುಟ್ಟು ಕರಕಲು

ಈ ಸುದ್ದಿಯನ್ನು ಶೇರ್ ಮಾಡಿ

Women-Fire--01
ನವದೆಹಲಿ, ಮೇ 5-ರಾಜಧಾನಿ ದೆಹಲಿಯಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಮಕ್ಕಳೂ ಸೇರಿದಂತೆ ನಾಲ್ವರು ಸುಟ್ಟು ಕರಕಲಾಗಿರುವ ಘಟನೆ ಸಂಭವಿಸಿದೆ. ದೆಹಲಿಯ ಆದರ್ಶ ನಗರ ಪ್ರದೇಶದ ಮನೆಯೊಂದರಲ್ಲಿ ಏರ್ ಕಂಡಿಷನರ್ ಕಂಪ್ರೆಸರ್ ಸ್ಫೋಟಗೊಂಡು ಬಾಲಕ ಮತ್ತು ಆಕೆಯ ಸಹೋದರಿ ಸುಟ್ಟು ಕರಲಾಗಿದ್ದಾರೆ. ನಿನ್ನೆ ರಾತ್ರಿ 11.15ರಲ್ಲಿ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಒಂದು ತಾಸು ಶ್ರಮಿಸಿ ಬೆಂಕಿಯನ್ನು ನಂದಿಸಿದರು. ಮತ್ತೊಂದು ಪ್ರಕರಣದಲ್ಲಿ ದಕ್ಷಿಣ ದೆಹಲಿ ಕೋಟ್ಲಾ ಮುಬಾರಕ್‍ಪುರ್ ಪ್ರದೇಶದಲ್ಲಿ ಟೆಂಟ್ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿ ಇಬ್ಬರು ಸಜೀವ ದಹನಗೊಂಡಿದ್ದಾರೆ.

Facebook Comments

Sri Raghav

Admin