ಮೋದಿ – ರಾಹುಲ್ ವಿದೂಷಕರಿದ್ದಂತೆ : ಎಚ್‍ಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy--01-Rahul-Modi
ಕೊಪ್ಪಳ, ಮೇ 5- ಯಾರೋ ಬರೆದುಕೊಟ್ಟ ಭಾಷಣ ಮಾಡುವ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರು ವಿದೂಷಕರಿದ್ದಂತೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಸೀಜನ್ ಪೊಲಿಟೀಷಿಯನ್, ನಾಲ್ವರು ಇತಿಹಾಸಕಾರರ ಹೆಸರು ಹೇಳಿದ್ರೆ ಜನ ಒಪ್ತಾರಾ..?  ಮೋದಿ ಭಾಷಣವನ್ನು ಜನರು ಗಂಭೀರವಾಗಿ ತೆಗೆದುಕೊಂಡಿಲ್ಲ. ಯಾರೋ ಬರೆದು ಕೊಟ್ಟಿದ್ದನ್ನು ಮೋದಿ ಮತ್ತು ರಾಹುಲ್ ಓದಿ ಹೋಗ್ತಾರೆ ಎಂದು ಟೀಕಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಪದೇ ಪದೇ ಅಪ್ಪನ ಆಣೆ ಮಾಡಿ ಜೆಡಿಎಸ್ ಅಧಿಕಾರಕ್ಕೆ ಬರಲ್ಲ ಎಂದು ಹೇಳುತ್ತಿದ್ದಾರೆ. ರಾಜ್ಯದ ಜನತೆ ಮೇ 15ರಂದು ಸಿಎಂಗೆ ಯಾರಪ್ಪನ ಆಣೆ ಎಂಬುದನ್ನು ತೋರಿಸಲಿದ್ದಾರೆ ಎಂದು ತಿರುಗೇಟು ನೀಡಿದರು. ದೇವೇಗೌಡರು ಹಿರಿಯ ರಾಜಕಾರಣಿ. ಹೀಗಾಗಿ ಮೋದಿ ಅವರನ್ನು ಹೊಗಳಿದ್ದಾರೆ ಅಷ್ಟೆ. ಆದರೆ, ಜೆಡಿಎಸ್‍ಗೆ ಮತ ಹಾಕಿದರೆ ವ್ಯರ್ಥವಾಗುತ್ತದೆ ಎಂದು ಹೇಳಿರುವುದು ಸರಿಯಲ್ಲ. ಈ ಬಾರಿ ಜೆಡಿಎಸ್ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದೆ. ನಾವು ಕಿಂಗ್ ಮೇಕರ್ ಅಲ್ಲ. ನಾವೇ ಕಿಂಗ್ ಆಗುತ್ತೇವೆ ಎಂದರು.  ಸಿಎಂಗೆ ಕಾಂಗ್ರೆಸ್ ಸೋಲುವ ಭೀತಿ ಇರುವ ಕಾರಣ ಹಣ ಕೊಟ್ಟು ಸಿನಿಮಾ ನಟರನ್ನು ಕರೆತಂದು ಪ್ರಚಾರ ಮಾಡಿಸುತ್ತಿದ್ದಾರೆ. ನಟರು ಹಣಕ್ಕಾಗಿ ಯಾರ ಪರವಾದರೂ ಪ್ರಚಾರ ಮಾಡುತ್ತಾರೆ. ಅವರ ಮಾತು ಕೇಳಿ ಯಾರೂ ಮತ ಚಲಾಯಿಸುವುದಿಲ್ಲ ಎಂದು ಎಚ್‍ಡಿಕೆ ಹರಿಹಾಯ್ದರು.

Facebook Comments

Sri Raghav

Admin