ಸಿಎಂ ಸಿದ್ದರಾಮಯ್ಯ ಗೆಲುವಿಗಾಗಿ ಕೇಶಮುಂಡನ

ಈ ಸುದ್ದಿಯನ್ನು ಶೇರ್ ಮಾಡಿ

AAP--01

ಮೈಸೂರು, ಮೇ 5- ತಮ್ಮ ನೆಚ್ಚಿನ ಅಭ್ಯರ್ಥಿಗಳ ಗೆಲುವಿಗಾಗಿ ಅಭಿಮಾನಿಗಳು ಪೂಜೆ, ಹೋಮ, ಹವನ ಮಾಡಿಸುವುದನ್ನು ಕೇಳಿದ್ದೇವೆ. ಆದರೆ, ಇಲ್ಲಿ ಸಿದ್ದರಾಮಯ್ಯ ಅವರ ಕೆಲವು ಅಭಿಮಾನಿಗಳು ಕೇಶ ಮುಂಡನೆ ಮಾಡಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಹಾಗೂ ಬಾದಾಮಿ ಕ್ಷೇತ್ರಗಳಲ್ಲಿ ಜಯಗಳಿಸಲಿ ಎಂಬ ಹಿನ್ನೆಲೆಯಲ್ಲಿ ಕೆಲ ಅಭಿಮಾನಿಗಳು ವಿಭಿನ್ನವಾಗಿ ಹರಕೆ ಹೊತ್ತಿದ್ದಾರೆ.  ನಗರದ ರಮಾಬಾಯಿ ನಗರದ ಐದು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಸಿದ್ದರಾಮಯ್ಯ ಗೆಲುವಿಗಾಗಿ ಇಂದು ಬೆಳಗ್ಗೆ ಕೇಶಮುಂಡನೆ ಮಾಡಿಸಿಕೊಳ್ಳುವ ಮೂಲಕ ನಿಷ್ಟೆ ಪ್ರದರ್ಶಿಸಿದ್ದಾರೆ. ಮಹಿಳೆಯರು ಮತ್ತು ಮಕ್ಕಳು ನಾಡ ಅಧಿದೇವತೆ ಚಾಮುಂಡೇಶ್ವರಿ ಹಾಗೂ ಬನಶಂಕರಿ ಫೋಟೋ ಇಟ್ಟುಕೊಂಡು ಕಳಸ ಹೊತ್ತು ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಿಎಂ ಗೆಲುವಿಗೆ ಪ್ರಾರ್ಥಿಸಿದರು.

Facebook Comments

Sri Raghav

Admin