ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (06-05-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ಎಲೈ ತಾವರೆಗೊಳವೇ! ಮೂರ್ಖ ರಾದ ಕೊಕ್ಕರೆಗಳು ಅವಮಾನ ಮಾಡಿದುವೆಂದು ನೀನೇಕೆ ಮನಸ್ಸು ಕೆಡಿಸಿಕೊಳ್ಳುತ್ತೀಯೆ..? ಮಕರಂದದ ರುಚಿಯನ್ನು ಬಲ್ಲ ಹೊಗಳುವ ದುಂಬಿಗಳು ಪ್ರಪಂಚದಲ್ಲಿ ಚಿರಕಾಲ ಇಲ್ಲವೇ..! ಮೂರ್ಖರು ಅವಮಾನ ಗೊಳಿಸಿದರೂ, ಹೊಗಳುವ ರಸಿಕರು ಎಲ್ಲ ಕಾಲದಲ್ಲಿಯೂ ಇದ್ದೇ ಇರುತ್ತಾರೆ.– ಭಾಮಿನೀವಿಲಾಸ

Rashi

ಪಂಚಾಂಗ : ಭಾನುವಾರ, 06.05.2018

ಸೂರ್ಯ ಉದಯ ಬೆ.05.56 / ಸೂರ್ಯ ಅಸ್ತ ಸಂ.06.35
ಚಂದ್ರ ಉದಯ ರಾ.11.56 / ಚಂದ್ರ ಅಸ್ತ ರಾ.10.52
ವಿಲಂಬಿ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ
ಕೃಷ್ಣ ಪಕ್ಷ / ತಿಥಿ : ಷಷ್ಠಿ (ಮ.03.56) / ನಕ್ಷತ್ರ: ಉತ್ತರಾಷಾಢ (ರಾ.04.40)
ಯೋಗ: ಸಾಧ್ಯ (ಬೆ.11.54) / ಕರಣ: ವಣಿಜ್-ಭದ್ರೆ (ಮ.03.56-ರಾ.05.13)
ಮಳೆ ನಕ್ಷತ್ರ: ಭರಣಿ / ಮಾಸ: ಮೇಷ / ತೇದಿ: 23

ರಾಶಿ ಭವಿಷ್ಯ  :  

ಮೇಷ : ಕುಟುಂಬದಲ್ಲಿ ಕಲಹ, ಕ್ಷುಲ್ಲಕ ಕಾರಣ ಗಳಿಂದ ವಿರಸ, ಮಿತ್ರರು ಶತ್ರುಗಳಾಗುವರು
ವೃಷಭ : ಆರೋಗ್ಯದ ಬಗ್ಗೆ ಅತಿ ಕಾಳಜಿ ವಹಿಸಿ
ಮಿಥುನ: ನ್ಯಾಯಾಲಯದಲ್ಲಿ ಜಯ ಸಿಗುವುದು, ಸ್ನೇಹಿತರಿಂದ ಲಾಭವಿದೆ, ಕೀರ್ತಿ ಲಭಿಸುವುದು
ಕಟಕ : ಮನೆಯಲ್ಲಿ ಶುಭ ಸಮಾರಂಭಗಳು ನಡೆಯುವ ಸಾಧ್ಯತೆಗಳಿವೆ
ಸಿಂಹ: ಅಗತ್ಯ ವಸ್ತುಗಳ ಖರೀದಿಯಿಂದ ಮನಸ್ಸಿಗೆ ಸಂತೋಷವಾಗುತ್ತದೆ
ಕನ್ಯಾ: ಮಕ್ಕಳಿಗೆ ವಿದ್ಯಾಭ್ಯಾಸ ದಲ್ಲಿ ಆಸಕ್ತಿ ಇರುತ್ತದೆ
ತುಲಾ: ಧಾರ್ಮಿಕ ಕಾರ್ಯ ಮಾಡಲು ಹೆಚ್ಚು ಆಸಕ್ತಿ
ವೃಶ್ಚಿಕ: ದಾಂಪತ್ಯ ಜೀವನ ಸುಖಮಯವಾಗಿರುತ್ತದೆ
ಧನುಸ್ಸು: ರಾಜಕೀಯ ಮುಖಂಡರ ಜೊತೆ ಕಾದಾಟ, ಅನಾವಶ್ಯಕವಾಗಿ ಪ್ರಯಾಣ ಮಾಡುವಿರಿ
ಮಕರ: ಬಂಧುಗಳ ಸಹಾಯದಿಂದ ನಿಮ್ಮ ಕೆಲಸ- ಕಾರ್ಯಗಳನ್ನು ಸುಲಭವಾಗಿ ಮಾಡಿಕೊಳ್ಳುವಿರಿ
ಕುಂಭ: ಪತಿ-ಪತ್ನಿಯರಲ್ಲಿ ಒಮ್ಮತವಿರುತ್ತದೆ
ಮೀನ: ಹಳೆಯ ಸ್ನೇಹಿತರನ್ನು ಭೇಟಿ ಮಾಡುವಿರಿ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments

Sri Raghav

Admin