ಕುಣಿಗಲ್ ತಾಲೂಕಿನ ವಿವಿದೆಡೆ ಕಂಪಿಸಿದ ಭೂಮಿ, ಜನರಲ್ಲಿ ಆತಂಕ

ಈ ಸುದ್ದಿಯನ್ನು ಶೇರ್ ಮಾಡಿ

Earthquake-01

ಕುಣಿಗಲ್, ಮೇ 6-ತಾಲೂಕಿನ ವಿವಿಧ ಕಡೆ ಭೂಮಿ ಕಂಪಿಸಿದ ಘಟನೆ ನಡೆದಿದ್ದು, ಜನರಲ್ಲಿ ಆತಂಕ ಉಂಟು ಮಾಡಿತ್ತು. ನಿನ್ನೆ ಮಧ್ಯಾಹ್ನ 3.15ರಲ್ಲಿ ತಾಲೂಕಿನ ಅಮೃತೂರು ಹೋಬಳಿಯ ಸಣಬ, ಜಿನ್ನಾಗ್ರ, ಬೆನ್ನವಾರ, ಕುಪ್ಪೆ ಸೇರಿದಂತೆ ಕಸಬ ಹೋಬಳಿಯ ವಿವಿಧ ಕಡೆ ಲಘು ಭೂಕಂಪನ ಅನುಭವವಾಗಿದೆ. ಎಂದಿನಂತೆ ಜನರು ತಮ್ಮ ಕಾರ್ಯದಲ್ಲಿ ತೊಡಗಿದ್ದಾಗ ಭೂಮಿ ಕಂಪಿಸಿದೆ. ಇದರಿಂದ ಭಯಗೊಂಡ ಜನರು ಮನೆಯಿಂದ ಹೊರಬಂದಿದ್ದು, ಆತಂಕಕ್ಕೀಡಾಗಿದ್ದಾರೆ.

ಇದರಂತೆಯೇ ಪಟ್ಟಣದ ಪ್ರವಾಸಿ ಮಂದಿರದಲ್ಲೂ ಕೂಡ ಭೂಮಿ ಕಂಪಿಸಿದ ಅನುಭವವಾಗಿದ್ದು, ಅಲ್ಲೇ ತಂಗಿದ್ದ ಚುನಾವಣಾಧಿಕಾರಿಗೆ ಜನರು ಮಾಹಿತಿ ನೀಡಿದ್ದಾರೆ. ಆದರೆ ಭೂಕಂಪದ ಬಗ್ಗೆ ರಿಕ್ಟರ್ ಮಾಪಕದಲ್ಲಿ ಯಾವುದೇ ಅಂಕಿಅಂಶ ದೊರೆತಿಲ್ಲ. ಆದರೂ ಜನರು ಭೂಮಿ ನಡುಗಿದ್ದರಿಂದ ಭಯದ ವಾತಾವರಣವಿದ್ದು ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತ್ತು.

Facebook Comments

Sri Raghav

Admin