ಪ್ರಕಾಶ್ ರೈ, ಜಿಗ್ನೇಶ್ ವಿರುದ್ಧ ಕ್ರಮಕೈಗೊಳ್ಳವಂತೆ ರಾಜ್ಯಪಾಲರಿಗೆ ದೂರು

ಈ ಸುದ್ದಿಯನ್ನು ಶೇರ್ ಮಾಡಿ

Prakash-Rai--01

ಚಿಕ್ಕಮಗಳೂರು, ಮೇ 6- ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಂಡಿರುವ ಗುಜರಾತ್ ಶಾಸಕ ಜಿಗ್ನೇಶ್‍ಮೇವಾನಿ, ನಟ ಪ್ರಕಾಶ್ ರೈ ಹಾಗೂ ಇವರ ವಿರುದ್ಧ ಕ್ರಮಕೈಗೊಳ್ಳಲು ರಾಜ್ಯಪಾಲರಿಗೆ ದೂರು ನೀಡಲಾಗುವುದು ಎಂದು ಜಿಲ್ಲಾ ಬಿಜೆಪಿ ವಕ್ತಾರ ಸಿ.ಎಚ್.ಲೋಕೇಶ್ ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂವಿಧಾನದ ರಕ್ಷಕರು ಎಂದು ಹೇಳಿಕೊಳ್ಳುವ ಇವರು ಕೋಮುಭಾವನೆ ಕೆರಳಿಸುವ ರೀತಿ ಸಾರ್ವಜನಿಕ ಸಭೆಗಳಲ್ಲಿ ಭಾಷಣ ಮಾಡಿದ್ದಾರೆ. ಕಾರ್ಯಕ್ರಮಗಳಿಗೆ ಜಿಲ್ಲಾಡಳಿತ ಅವಕಾಶ ನೀಡದಿದ್ದಾಗ ನಗರದ ಅಂಡೇಛತ್ರದಲ್ಲಿ ಕಾರ್ಯಕ್ರಮನಡೆಸಿ ಪೊಲೀಸರ ಎದುರೇ ಸಂವಿಧಾನ ವಿರೋಧಿ ಭಾಷಣ ಮಾಡಿದ್ದಾರೆ.

ಪೊಲೀಸರು ಆ ಕೂಡಲೇ ಬಂಧಿಸುವುದನ್ನು ಬಿಟ್ಟು ಅವರು ಭಾಷಣ ಮಾಡಿ ಊರು ಖಾಲಿ ಮಾಡಿ ಹೋದ ನಂತರ ಅವರ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಆರೋಪಿಸಿದರು. ಹಾಗಾಗಿ ಜಿಲ್ಲಾಡಳಿತ ಹಾಗೂ ಭಾಷಣ ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಪ್ರಧಾನಿ ಮೋದಿ ಅವರ ಮೇಲೆ ನಾಲಿಗೆ ಹರಿಬಿಡುತ್ತಿರುವ ರೈ ಮತ್ತು ಇವರಿಗೆ ಕರ್ನಾಟಕದಲ್ಲಿ ಕಾರ್ಯಕ್ರಮ ನಡೆಸಲು ಅವಕಾಶ ನೀಡ ಬಾರದು ಎಂದ ಅವರು, ಕೆಜಿಎಫ್ ಲೆಟರೆಡ್‍ನಲ್ಲಿ ಕಾಂಗ್ರೆಸ್ ಬೆಂಬಲಿಸುವಂತೆ ಕರಪತ್ರ ಹೊರಡಿಸಿರುವುದು ಖಂಡನೀಯ ಎಂದರು. ಕೆಜಿಎಫ್ ಸಂಘಟನೆಯಲ್ಲಿ ಎಲ್ಲ ಜಾತಿಯ ಜನತೆ ಸದಸ್ಯರಾಗಿದ್ದು, ಒಂದು ಪಕ್ಷದ ಪರವಾಗಿ ಕರಪತ್ರ ಮಾಡಿಸಿರುವುದು ಕರ್ನಾಟಕ ಬೆಳೆಗಾರರ ಒಕ್ಕೂಟ ಕಾಂಗ್ರೆಸ್ ಪಕ್ಷಕ್ಕೆ ಮಾರಿಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದರು.

Facebook Comments

Sri Raghav

Admin