ಶಾರ್ಟ್ ಸಕ್ರ್ಯೂಟ್‍ನಿಂದ ಮನೆಗೆ ಬೆಂಕಿ ಬಿದ್ದು ದಂಪತಿ ಸಜೀವ ದಹನ

ಈ ಸುದ್ದಿಯನ್ನು ಶೇರ್ ಮಾಡಿ

ರಾಯಚೂರು, ಮೇ 6- ಕಳೆದ ರಾತ್ರಿ ಮನೆಗೆ ಬೆಂಕಿ ಬಿದ್ದು ಅದರಲ್ಲಿದ್ದ ದಂಪತಿ ಸಜೀವವಾಗಿ ದಹನಗೊಂಡಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಮಾನ್ವಿ ತಾಲ್ಲೂಕಿನ ಅಮರೇಶ್ವರ ಕ್ಯಾಂಪ್‍ನಲ್ಲಿ ನಡೆದಿದೆ. ಮೃತರನ್ನು ಪ್ರಕಾಶ್ (55), ಕೃಷ್ಣವೇಣಿ (40) ಎಂದು ತಿಳಿದು ಬಂದಿದೆ. ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.

ಎಂದಿನಂತೆ ದಂಪತಿ ರಾತ್ರಿ ಮಲಗಿದ್ದರು. ಮನೆಯಲ್ಲಿ ಸಂಗ್ರಹಿಸಿದ್ದ ಭತ್ತದ ಹೊಟ್ಟಿಗೆ ಶಾರ್ಟ್ ಸಕ್ರ್ಯೂಟ್‍ನಿಂದ ಕಿಡಿ ಬಿದ್ದು , ಬೆಂಕಿ ಹೊತ್ತಿಕೊಂಡಿದೆ. ಬಾಗಿಲು ಹಾಕಿದ್ದರಿಂದ ಮನೆ ಪೂರ್ತಿ ಹೊಗೆ ಕಾಣಿಸಿಕೊಂಡರೂ ದಂಪತಿಗೆ ಎಚ್ಚರವಾಗಿರಲಿಲ್ಲ. ಬೆಂಕಿ ಮನೆ ಪೂರ್ತಿ ವ್ಯಾಪಿಸಿದಾಗ ಏಳಲು ಸಾಧ್ಯವಾಗದೆ ಉಸಿರುಗಟ್ಟಿಯೇ ಇವರು ಸಾವನ್ನಪ್ಪಿರಬಹುದು ಎಂದು ಹೇಳಲಾಗಿದೆ. ಮುಂಜಾನೆ ಮನೆಯಿಂದ ಹೊಗೆ ಬರುತ್ತಿರುವುದನ್ನು ನೋಡಿ ಸ್ಥಳೀಯರು ಹತ್ತಿರ ಹೋಗಿ ನೋಡಿದಾಗ ಬೆಚ್ಚಿ ಬಿದ್ದಿದ್ದಾರೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆಬರುವಷ್ಟರಲ್ಲಿ ದಂಪತಿ ದಹನಗೊಂಡಿದ್ದಾರೆ.

Fire-Raichur--01

Facebook Comments

Sri Raghav

Admin