ಅದ್ನಾನ್ ಸಾಮಿ ಮತ್ತು ಸಿಬ್ಬಂದಿಗಳನ್ನು ಭಾರತೀಯ ನಾಯಿಗಳೆಂದು ನಿಂದಿಸಿದ ಕುವೈತ್ ಏರ್ಪೋರ್ಟ್ ಅಧಿಕಾರಿಗಳು..!

ಈ ಸುದ್ದಿಯನ್ನು ಶೇರ್ ಮಾಡಿ

Adnan-Sami
ಕುವೈತ್,ಮೇ7- ಅಂತಾರಾಷ್ಟ್ರೀಯ ಖ್ಯಾತಿಯ ಗಾಯಕ ಅದ್ನಾನ್ ಸಾಮಿ ಮತ್ತು ಆತನ ಸಿಬ್ಬಂದಿಯನ್ನು ಕುವೈತ್ ವಿಮಾನ ನಿಲ್ದಾಣದಲ್ಲಿ ಭಾರತೀಯ ನಾಯಿಗಳು ಎಂದು ನಿಂದಿಸಲಾಗಿದೆ. ಕುವೈತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಲಸೆ ಅಧಿಕಾರಿಗಳು ನನ್ನನ್ನು ಮತ್ತು ನನ್ನ ಸಿಬ್ಬಂದಿಗಳನ್ನು ಭಾರತೀಯ ನಾಯಿಗಳು ಎಂದು ನಿಂದಿಸಿದ್ದಾರೆ ಎಂದು ಸ್ವತಃ ಅದ್ನಾನ್ ಸಾಮಿ ಅವರೇ ಬಹಿರಂಗಪಡಿಸಿದ್ದಾರೆ.

ಲೈವ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ ನನ್ನನ್ನು ಮತ್ತು ನನ್ನ ಸಿಬ್ಬಂದಿಗಳನ್ನು ಅಲ್ಲಿನ ಸಿಬ್ಬಂದಿಗಳನ್ನು ಹೀನಾಯವಾಗಿ ನಡೆಸಿಕೊಂಡ ಬಗ್ಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಟ್ಯಾಗ್ ಮಾಡಿ ಅದ್ನಾನ್ ಸಾಮಿ ಟ್ವಿಟ್ ಮಾಡಿದ್ದಾರೆ. ಸಾಮಿ ಅವರ ಟ್ವಿಟ್‍ಗೆ ಪ್ರತಿಕ್ರಿಯಿಸಿರುವ ಸುಷ್ಮಾ ಸ್ವರಾಜ್ ಅವರು, ನಿಮಗಾಗಿರುವ ಅವಮಾನ ಕುರಿತಂತೆ ನನಗೆ ದೂರವಾಣಿ ಕರೆ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ನಂತರ ಸಾಮಿ ಅವರನ್ನು ಸಂಪರ್ಕಿಸಿದ ಗೃಹ ಖಾತೆ ಇಲಾಖೆ ರಾಜ್ಯ ಸಚಿವ ಕಿರೆನ್ ರಿಜ್ಜು ಅವರು ನಿಮಗಾದ ಅವಮಾನವನ್ನು ಸರಿಪಡಿಸಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳುವಂತೆ ಸುಷ್ಮಾ ಸ್ವರಾಜ್ ಅವರು ನನಗೆ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ. ಭಾರತೀಯರಿಗೆ ವಿದೇಶದಲ್ಲಿ ಆದ ಅಪಮಾನಕ್ಕೆ ತಕ್ಷಣ ಪ್ರತಿಕ್ರಿಯಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ನಿಲುವನ್ನು ಅದ್ನಾನ್ ಸಾಮಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಮೂಲತಃ ಪಾಕಿಸ್ತಾನದವರಾದ ಅದ್ನಾನ್ ಸಾಮಿ ಅವರು 2015ರಲ್ಲಿ ಭಾರತೀಯ ಪೌರತ್ವ ಪಡೆದುಕೊಂಡಿದ್ದು , ಭಾರತೀಯರಾಗಿ ಅದ್ನಾನ್ ಸಾಮಿ ಪರಿವರ್ತನೆಗೊಂಡಿದ್ದರು.

Facebook Comments

Sri Raghav

Admin