ಆರ್.ಆರ್.ನಗರ ಕ್ಷೇತ್ರದಲ್ಲಿ ಹಂಚಲು ಸಾಗಿಸುತ್ತಿದ್ದ 25000 ಶಾಟ್ಸ್, 5000 ಟೀಶರ್ಟ್ ವಶ

ಈ ಸುದ್ದಿಯನ್ನು ಶೇರ್ ಮಾಡಿ

T-shirt--01

ಬೆಂಗಳೂರು,ಮೇ7-ಕಂಟೈನರ್‍ನಲ್ಲಿ ಸಾಗಿಸಲಾಗುತ್ತಿದ್ದ, ಆರ್‍ಆರ್‍ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ರಾಷ್ಟ್ರೀಯ ಪಕ್ಷವೊಂದರ ಅಭ್ಯರ್ಥಿಗೆ ಸೇರಿದ್ದು ಎನ್ನಲಾದ ಲಕ್ಷಾಂತರ ಮೌಲ್ಯದ ಬಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ.ತಮಿಳುನಾಡಿನ ತಿರ್‍ಪುರ್‍ನಿಂದ ಆಗಮಿಸುತ್ತಿದ್ದ ಕಂಟೈನರ್‍ನಲ್ಲಿ 25 ಸಾವಿರ ಶಾಟ್ಸ್ (ತುಂಡು ಚಡ್ಡಿ) ಹಾಗೂ 5000 ಟೀಶರ್ಟ್‍ಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು.

ಈ ಕುರಿತಂತೆ ಮಾಹಿತಿ ಪಡೆದ ಚುನಾವಣಾಧಿಕಾರಿಗಳು ಮತ್ತು ಪೊಲೀಸರು 80 ಅಡಿ ರಸ್ತೆಯಲ್ಲಿ ವಾಹನ ತಡೆದು ಪರಿಶೀಲನೆ ನಡೆಸಿದಾಗ ವಾಹನದಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಬಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತಂತೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಠಾಣೆಗೆ ಭೇಟಿ ನೀಡಿರುವ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

Facebook Comments

Sri Raghav

Admin