ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (07-05-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ನೀನು ದೊಡ್ಡ ರಾಜನಿರಬಹುದು. ನಾವೂ ಸಹ ಗುರುಸೇವೆಯಿಂದ ಗಳಿಸಿದ ಬುದ್ಧಿಶಕ್ತಿಯಿಂದ ದೊಡ್ಡವರೆನಿಸಿದ್ದೇವೆ. ಹಣದಿಂದ ನಿನಗೆ ಖ್ಯಾತಿ ಇದೆ. ನಮ್ಮ ಕೀರ್ತಿಯನ್ನು ಕವಿಗಳು ದಿಕ್ಕು ದಿಕ್ಕುಗಳಲ್ಲಿ ಹರಡುತ್ತಿದ್ದಾರೆ. ಆದ್ದರಿಂದ, ಎಲೈ ಅಭಿಮಾನಶಾಲಿಯೆ, ನಮಗೂ ನಿನಗೂ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ. ನಮ್ಮ ವಿಷಯದಲ್ಲಿ ನೀನು ಉದಾಸೀನನಾದರೆ, ನಿನ್ನಲ್ಲಿಯೂ ನಮಗೆ ಆಸಕ್ತಿ ಇಲ್ಲ! -ವೈರಾಗ್ಯಶತಕ

Rashi

ಪಂಚಾಂಗ : 07.05.2018,  ಸೋಮವಾರ

ಸೂರ್ಯ ಉದಯ ಬೆ.05.57 / ಸೂರ್ಯ ಅಸ್ತ ಸಂ.06.36
ಚಂದ್ರ ಉದಯ ರಾ.12.40 / ಚಂದ್ರ ಅಸ್ತ ರಾ.11.42
ವಿಲಂಬಿ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ
ಕೃಷ್ಣ ಪಕ್ಷ /ತಿಥಿ : ಸಪ್ತಮಿ (ಸಾ.06.28) / ನಕ್ಷತ್ರ: ಶ್ರವಣ (ದಿನಪೂರ್ತಿ)
ಯೋಗ: ಶುಭ (ಮ.12.56) / ಕರಣ: ಭವ (ಸಾ.06.28)/ ಮಳೆ ನಕ್ಷತ್ರ: ಭರಣಿ
ಮಾಸ: ಮೇಷ / ತೇದಿ: 24

ರಾಶಿ ಭವಿಷ್ಯ  :  

ಮೇಷ : ಬಂದ ಹಣ ನೀರಿನಂತೆ ಖರ್ಚಾಗುತ್ತದೆ
ವೃಷಭ : ಹೆಂಡತಿಯ ಸವಿನುಡಿಗಳಿಗೆ ಮರುಳಾಗದಿರಿ
ಮಿಥುನ: ಆಸ್ತಿ ಖರೀದಿಸುವ ಯೋಗವಿದೆ
ಕಟಕ : ಆರೋಗ್ಯ ಉತ್ತಮವಾಗಿರುವುದು, ಪ್ರೇಮಿಗಳಿಗೆ ಅನುಕೂಲಕರ ದಿನ
ಸಿಂಹ: ಪಿತ್ರಾರ್ಜಿತ ಆಸ್ತಿಗಾಗಿ ಕಲಹವಾಗಲಿದೆ
ಕನ್ಯಾ: ಕುಟುಂಬದಲ್ಲಿ ಸಾಮರಸ್ಯ ಕಂಡುಬರುತ್ತದೆ, ಭೋಗವಸ್ತು ಖರೀದಿಸುವಿರಿ
ತುಲಾ: ಅನೇಕ ವಿಧವಾದ ಮಧುರ ಘಟನೆಗಳು ನಡೆಯ ಲಿವೆ, ವೈದ್ಯರಿಗೆ ಅನುಕೂಲ
ವೃಶ್ಚಿಕ: ತಾಯಿಯ ಆರೋಗ್ಯ ದಲ್ಲಿ ವ್ಯತ್ಯಾಸವಾಗಲಿದೆ
ಧನುಸ್ಸು: ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ
ಮಕರ: ಮಾನಸಿಕ ಕಿರಿಕಿರಿ ಇರುತ್ತದೆ, ಶಾಂತಿ ಕಳೆದುಕೊಳ್ಳುವಿರಿ, ವಾಹನದಿಂದ ನಷ್ಟ ಅನುಭವಿಸುವಿರಿ
ಕುಂಭ: ಉತ್ತಮ ವಸ್ತ್ರಾಭರಣ ಖರೀದಿಸುವಿರಿ, ಉದ್ಯೋಗದಲ್ಲಿ ನಿರೀಕ್ಷಿತ ಯಶಸ್ಸನ್ನು ಕಾಣುವಿರಿ
ಮೀನ: ಮಕ್ಕಳು ಹಿತವಚನ ಕೇಳುವುದಿಲ್ಲ, ವ್ಯಾಪಾರಿಗಳು ಮೋಸ ಹೋಗಬಹುದು

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments

Sri Raghav

Admin