ತಮ್ಮ ಮೃದು ಶೈಲಿಯಲ್ಲೇ ಮೋದಿಗೆ ತಿರುಗೇಟು ನೀಡಿದ ಮಾಜಿ ಪ್ರಧಾನಿ ಸಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

PM-Singh

ಬೆಂಗಳೂರು, ಮೇ 7- ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಬಳಸಿರುವ ಭಾಷೆ ಸಾರ್ವಜನಿಕ ಜೀವನದಲ್ಲಿರುವ ಘನತೆಯನ್ನು ಕುಂದುವಂತೆ ಮಾಡಿದೆ ಎಂದು ಮಾಜಿ ಪ್ರಧಾನಿ ಡಾ.ಮನಮೋಹನ್‍ಸಿಂಗ್ ಆಕ್ಷೇಪ ವ್ಯಕ್ತಪಡಿಸಿದರು. ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಮೃದು ಶೈಲಿಯಲ್ಲೇ ಮೋದಿ ವಿರುದ್ಧ ಖಾರವಾಗಿ ಹೇಳಿಕೆ ನೀಡಿದರು.

ಹಿಂದಿನ ಯಾವ ಪ್ರಧಾನಿಯೂ ಬಂದು ಚುನಾವಣೆಯಲ್ಲಿ ತಮ್ಮ ಅಧಿಕಾರವನ್ನು ಈ ಮಟ್ಟಕ್ಕೆ ದುರುಪಯೋಗಪಡಿಸಿಕೊಂಡಿರಲಿಲ್ಲ. ಚುನಾವಣಾ ಭಾಷಣದಲ್ಲಿ ಭಾಷೆ ಬಳಕೆ ಬಗ್ಗೆ ಎಚ್ಚರದಿಂದಿರಬೇಕು. ಮೋದಿಯವರು ಅವೆಲ್ಲವನ್ನೂ ಮೀರಿ ಮಾತನಾಡುತ್ತಿದ್ದಾರೆ. ಇದು ದೇಶದ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಅಸಮಾಧಾನವ್ಯಕ್ತಪಡಿಸಿದರು.

ಮೋದಿಯವರು ತಮ್ಮ ಭಾಷಣದ ಮೂಲಕ ಸಮಾಜವದಲ್ಲಿ ಬಿರುಕು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ರಾಜಕೀಯ ಕಾರಣಕ್ಕಾಗಿ ತಮ್ಮ ಪರವಾಗಿ ಒಂದಷ್ಟು ಜನರನ್ನು ಗುಂಪುಗೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ದೇಶದ ಸಮಗ್ರತೆಯ ದೃಷ್ಟಿಯಿಂದ ಒಳ್ಳೆಯದಲ್ಲ. ಈಗಲಾದರೂ ಮೋದಿ ಅವರು ಪಾಠಕಲಿತು ವಿಭಜನೆ ನೀತಿ ಕೈಬಿಡಲಿ ಎಂದು ಸಲಹೆ ನೀಡಿದರು.

2013ರಲ್ಲಿ ಬ್ಯಾಂಕುಗಳ ಅನುತ್ಪಾದಕ ಆಸ್ತಿ 28 ಸಾವಿರ ಕೋಟಿಯಷ್ಟಿತ್ತು. ಆದರೆ, ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ 1.11ಲಕ್ಷ ಕೋಟಿಗೆ ಏರಿಕೆಯಾಗಿದೆ. ಇದರಿಂದ ಬ್ಯಾಂಕಿಂಗ್ ವ್ಯವಸ್ಥೆಯನ್ನು ದಗೆಡಿಸಿದ್ದಾರೆ ಎಂದರೆ ದೇಶದ ಜಿಡಿಪಿ 7.8ರಷ್ಟಿದ್ದು, ಈಗ ಶೇ.50ರಷ್ಟು ಕುಸಿದಿದೆ. ಎನ್‍ಡಿಎ ಅವಧಿಯಲ್ಲಿ ಜಿಡಿಪಿ ಏರಿಕೆಯೇ ಆಗಿಲ್ಲ. ಇಡೀ ವಿಶ್ವ ಆರ್ಥಿಕಾಭಿವೃದ್ಧಿಯತ್ತ ಮುನ್ನಡೆಯುತ್ತಿರುವಾಗ ಭಾರತ ಆರ್ಥಿಕವಾಗಿ ಹಿನ್ನಡೆ ಅನುಭವಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಯೆಟ್ನಾಂನಂತಹ ದೇಶಗಳೇ ಅಭಿವೃದ್ಧಿಯತ್ತ ಮುಖ ಮಾಡಿರುವಾಗ ಸುಸಜ್ಜ….. ಸಂಪನ್ಮೂಲ ಹೊಂದಿರುವ ಭಾರತ ಹಿನ್ನಡೆ ಅನುಭವಿಸುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು.  ನೋಟು ಅಮಾನೀಕರಣ ಹಾಗೂ ಅವೈಜ್ಞಾನಿಕ ಜಿಎಸ್‍ಟಿಯಿಂದ ದೇಶದ ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ. 13ರಿಂದ 24 ವರ್ಷ ವಯಸ್ಸಿನ 75 ಲಕ್ಷ ಯುವಕರು ಉದ್ಯೋಗ ಕಳೆದುಕೊಂಡಿದ್ದು, ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ ಮೋದಿ, ತಮ್ಮ ತಪ್ಪು ನಿರ್ಧಾರದಿಂದ ಇರುವ ಉದ್ಯೋಗವನ್ನೂ ಕಸಿಯುತ್ತಿದ್ದಾರೆ ಎಂದು ಕಿಡಿಕಾರಿದರು.

Facebook Comments

Sri Raghav

Admin