ಮತ್ತೊಮ್ಮೆ ಅಪಘಾತಕ್ಕೊಳಗಾದ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಕಾರು

ಈ ಸುದ್ದಿಯನ್ನು ಶೇರ್ ಮಾಡಿ

Anant-Kumar--01

ಉತ್ತರ ಕನ್ನಡ, ಮೇ 7- ಬೆಂಗಾವಲು ವಾಹನಕ್ಕೆ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರ ಕಾರು ಡಿಕ್ಕಿ ಹೊಡೆದಿದ್ದು , ಅದೃಷ್ಟವಶಾತ್ ಸಚಿವರು ಅಪಾಯದಿಂದ ಪಾರಾಗಿರುವ ಘಟನೆ ನಡೆದಿದೆ. ಚುನಾವಣಾ ಪ್ರಚಾರಕ್ಕಾಗಿ ಶಿರಸಿಯಿಂದ ಹೊನ್ನಾವರಕ್ಕೆ ಅನಂತಕುಮಾರ್ ಹೆಗಡೆ ಹೋಗುತ್ತಿದ್ದರು. ಜಿಲ್ಲೆಯ ಕುಮಟಾದ ಯಾಣ ಕ್ರಾಸ್ ಬಳಿ ಮುಂದೆ ಹೋಗುತ್ತಿದ್ದ ವಾಹನ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ್ದ. ಅದನ್ನು ಕಂಡು ಸಚಿವರ ಬೆಂಗಾವಲು ವಾಹನ ಚಾಲಕ ಕೂಡ ಬ್ರೇಕ್ ಹಾಕಿದ್ದಾನೆ. ಇದರ ಹಿಂದೆ ಬರುತ್ತಿದ್ದ ಸಚಿವರ ಕಾರು ಚಾಲಕ ಬ್ರೇಕ್ ಹಾಕಿದರೂ ಸಫಲವಾಗದೆ ಹಿಂದಿನಿಂದ ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಸಚಿವರು ಅಪಾಯದಿಂದ ಪಾರಾಗಿದ್ದಾರೆ.  ಕುಮಟಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin