9 ರಂದು ಕೋಲಾರಕ್ಕೆ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

Modi-Chitradurga--01
ಕೋಲಾರ, ಮೇ 7-ಜಿಲ್ಲೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಇದೇ 9 ರಂದು ಆಗಮಿಸಿ ಚುನಾವಣಾ ಪ್ರಚಾರ ಮಾಡಲಿದ್ದಾರೆ.ಕೋಲಾರ ಬಂಗಾರಪೇಟೆ ನಡುವೆ ಬರುವ ಬೀರೇನಹಳ್ಳಿ ಬಳಿ ಇರುವ 22 ಎಕರೆ ಪ್ರದೇಶದಲ್ಲಿ ಬೃಹತ್ ವೇದಿಕೆ ಮತ್ತು ಹೆಲಿಪ್ಯಾಡನ್ನು ನಿರ್ಮಿಸಲಾಗಿದೆ. ಬೆಳಿಗ್ಗೆ 9 ಗಂಟೆಗೆ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡು 10 ಗಂಟೆಯಿಂದ ರಾಷ್ಟ್ರ, ರಾಜ್ಯ, ಸ್ಥಳೀಯ ನಾಯಕರು ಹಾಗೂ ಜಿಲ್ಲೆಯ ಅಭ್ಯರ್ಥಿಗಳು ಮಾತನಾಡಲಿದ್ದಾರೆ.  11 ಗಂಟೆಗೆ ಮೋದಿ ಅವರು ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಆಗಮಿಸಲಿದ್ದಾರೆ. ಸ್ಥಳೀಯ ನಾಯಕರಿಂದ ಸನ್ಮಾನ ಮಾಡಲಾಗುವುದು. 11.15ಕ್ಕೆ ಭಾಷಣ ಮಾಡಲಿದ್ದು, 12.15ಕ್ಕೆ ಮುಕ್ತಾಯಗೊಳ್ಳಲಿದೆ. ಅಲ್ಲಿಂದ ನಂತರ ಚಿಕ್ಕಮಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.

Facebook Comments

Sri Raghav

Admin