ಆರ್ ಆರ್ ನಗರದಲ್ಲಿ 9 ಸಾವಿರಕ್ಕೂ ಹೆಚ್ಚು ಅಕ್ರಮ ಗುರುತಿನ ಚೀಟಿಗಳು ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

Voter-Cards--01

ಬೆಂಗಳೂರು. ಮೇ.08 : ನಕಲಿ ಮತದಾರರ ಗುರುತಿನ ಚೀಟಿ ಮಾಡಿಕೊಡುತ್ತಿದ್ದ ತಂಡವನ್ನು ಚುನಾವಣಾ ವಿಚಕ್ಷಣ ದಳ ಪತ್ತೆ ಹಚ್ಚಿದೆ. ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿರುವ ಚುನಾವಣಾ ವಿಚಕ್ಷಣ ದಳದ ಅಧಿಕಾರಿಗಳು ಬರೋಬ್ಬರಿ 9 ಸಾವಿರಕ್ಕೂ ಹೆಚ್ಚು ಮತದಾರರ ನಕಲಿ ಗುರುತಿನ ಚೀಟಿ ವಶಪಡಿಸಿಕೊಂಡಿದ್ದಾರೆ. ರಾಜರಾಜೇಶ್ವರಿ ನಗರಕ್ಕೆ ಸೇರಿದ ಆರೋಪಿಗಳು ಸಾರ್ವಜನಿಕರಿಗೆ ನಕಲಿ ಗುರುತಿನ ಚೀಟಿ ಮಾಡಿಕೊಡುತ್ತಿದ್ದರು. ಕೆಲವರನ್ನು ಬೆದರಿಸಿ ಗುರುತಿನ ಚೀಟಿ ಪಡೆದುಕೊಂಡಿದ್ದರು. ಮತದಾರರನ್ನು ಬೆದರಿಸಿ ನಕಲಿ ಗುರುತಿನ ಚೀಟಿ ಮೂಲಕ ಮತ ಹಾಕಿಸುವ ಸಂಚು ರೂಪಿಸಿದ್ದರು ಎನ್ನಲಾಗಿದೆ.ಜಾಲಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗೂಂಡಾಗಿರಿ ಮೂಲಕ ಮತ ಪಡೆಯಲೂ ಹುನ್ನಾರ ನಡೆಸಲಾಗಿತ್ತು ಎಂದು ಸ್ಥಳೀಯರು ಆರೋಪಿಸಿದ್ದಾರೆ.  ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ರೀತಿಯ ಅಕ್ರಮ ನಡೆಯದಂತೆ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದೆ. ಹೀಗಿದ್ದರೂ ಕೂಡ ನಾನಾ ರೀತಿಯ ಅಕ್ರಮಗಳು ಬಯಲಾಗುತ್ತಲೇ ಇವೆ.

Facebook Comments

Sri Raghav

Admin