ಕಿಡ್ನಿ ಸ್ಟೋನ್ ನಿವಾರಣೆ ಇಲ್ಲಿದೆ ಟಿಪ್ಸ್..!

ಈ ಸುದ್ದಿಯನ್ನು ಶೇರ್ ಮಾಡಿ

kidny-1

ಕುಂಬಳಕಾಯಿ ಬೀಜಗಳು ದೇಹದಲ್ಲಿನ ವಿಷಾಂಶಗಳನ್ನು ಕಡಿಮೆ ಮಾಡುವಲ್ಲಿ ಸಹಕಾರಿ. ಇದು ಲಿವರ್ ಮತ್ತು ಮೂತ್ರಪಿಂಡಗಳ ಕಾರ್ಯಗಳನ್ನು ಸಮರ್ಪಕಗೊಳಿಸುತ್ತದೆ. ದೇಹದಲ್ಲಿರುವ ಯೂರಿಕ್ ಆಮ್ಲ ಮತ್ತಿತರ ಇತರ ವಿಷ ವಸ್ತುಗಳನ್ನು ಇದು ಹೊರ ಹಾಕಲು ನೆರವಾಗುತ್ತದೆ. ಇದರಿಂದಾಗಿ ಅಪಾಯಕಾರಿ ಕಿಡ್ನಿ ಸ್ಟೋನ್‍ಗಳು ಅಥವಾ ಮೂತ್ರಪಿಂಡ ಕಲ್ಲುಗಳು ರೂಪುಗೊಳ್ಳುವುದನ್ನು ತಡೆಗಟ್ಟುತ್ತದೆ. ಸಂಧಿವಾತ ನಿವಾರಣೆಯಲ್ಲೂ ಪ್ರಯೋಜನಕಾರಿ.

kidny-1-2

ಚಯಾಪಚಯ ಕ್ರಿಯೆಗೆ ಉತ್ತೇಜನ: ದೇಹವು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದಾಗ ಮಾತ್ರ ಆರೋಗ್ಯ ವೃದ್ಧಿಯಾಗುತ್ತದೆ. ಅಂದರೆ ಶರೀರದ ಮೆಟಬಾಲಿಸಂ ಅರ್ಥಾತ್ ಚಯಾಪಚಯ ಕ್ರಿಯೆ ಸುಗಮವಾಗಿ ನಡೆಯಬೇಕು. ಇದಕ್ಕೆ ಅಗತ್ಯವಾದ ಜೀವಸತ್ವಗಳು, ಫೋಷಕಾಂಶಗಳು ಮತ್ತು ಖನಿಜಗಳು ಅಗತ್ಯವಾಗಿರುತ್ತದೆ. ಚಯಾಪಚಯ ಕ್ರಿಯೆ ಪ್ರವರ್ತನೆಗೊಳ್ಳಲು ಅಮೈನೋ ಆಮ್ಲಗಳು ಮತ್ತು ಕಿಣ್ವಗಳು ಮುಖ್ಯ. ಇಂಥ ಪ್ರೊಟೀನ್‍ಗಳು ಕುಂಬಳಕಾಯಿ ಬೀಜಗಳಲ್ಲಿ ಇರುವುದರಿಂದ ದೇಹದ ಕಾರ್ಯ ಸಮರ್ಪಕವಾಗಿ ನಡೆಯಲು ನೆರವಾಗುತ್ತದೆ. ಪ್ರತಿದಿನ ಕುಂಬಳಕಾಯಿ ಬೀಜಗಳನ್ನು ಸೇವಿಸುವುದರಿಂದ ಪ್ರಯೋಜನ ಉಂಟು.

ಖಿನ್ನತೆ ಮತ್ತು ನಿದ್ರಾಭಂಗ ಉಪಶಮನ : ಕೆಲಸದ ಒತ್ತಡದಿಂದ ನಿತ್ರಾಣಗೊಂಡಿದ್ದರೆ, ದಣಿದಿದ್ದರೆ ಕುಂಬಳಕಾಯಿ ಬೀಜಗಳನ್ನು ಸೇವಿಸುವುದು ಒಳ್ಳೆಯದು. ಇದರಲ್ಲಿ ಮೆಗ್ನೀಷಿಯಂ ಮತ್ತು ಟ್ರೈಪ್ಟೊಫಾನ್ ಸಮೃದ್ಧವಾಗಿದ್ದು, ಖಿನ್ನತೆ ನಿವಾರಿಸುತ್ತದೆ ಮತ್ತು ನಿದ್ರಾಭಂಗವನ್ನು ಉಪಶಮನಗೊಳಿಸುತ್ತದೆ.

Facebook Comments

Sri Raghav

Admin