ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮನೆ ಮೇಲೆ ಐಟಿ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

madal-Virupakshappa

ದಾವಣಗೆರೆ,ಮೇ.08: ಚುನಾವಣೆಗೆ ಕೆಲವೇ ಕೇವಲ ಮೂರು ದಿನಗಳು ಬಾಕಿ ಇರುವಾಗಲೇ ಚನ್ನಗಿರಿ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಡಾಳ್ ವೀರುಪಾಕ್ಷಪ್ಪ ಅವರಿಗೆ ಐಟಿ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ಮಾಡಾಳ್ ವೀರುಪಾಕ್ಷಪ್ಪ ಅವರ ಚನ್ನೇಶಪು ಗ್ರಾಮದಲ್ಲಿ ಇರುವ ಮನೆಯ ಮೇಲೆ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ಪೊಲೀಸರ ಜೊತೆ ಬಂದ ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಹಣಕಾಸಿನ ವ್ಯವಹಾರ ಬಗ್ಗೆ ವಿವರಣೆ ನೀಡುವಂತೆ ಮಾಡಾಳ್ ವೀರುಪಾಕ್ಷಪ್ಪ ಅವರಿಗೆ ನೋಟಿಸ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.ಆದರೆ, ಈವರೆಗೂ ಯಾವುದೇ ಅಕ್ರಮ ಹಣವಾಗಲಿ, ಅಧವಾ ದಾಖಲೆಗಳಾಗಲಿ ಲಭ್ಯವಾಗಿಲ್ಲ ಎನ್ನಲಾಗಿದೆ.

Facebook Comments

Sri Raghav

Admin