ಪರಿಚಿತರಿಂದಲೇ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ : ರಕ್ಷಣಾ ಸಚಿವೆ

ಈ ಸುದ್ದಿಯನ್ನು ಶೇರ್ ಮಾಡಿ

Nirmala--02ನವದೆಹಲಿ, ಮೇ 8-ಚಿರಪರಿಚಿತರಿಂದಲೇ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ನಡೆಯುವುದರಿಂದ ಇಂಥ ಹಿಂಸಾಚಾರ ಮತ್ತು ಅಪರಾಧಗಳನ್ನು ತಡೆಗಟ್ಟಲು ಸರ್ಕಾರಿ ಸಂಸ್ಥೆಗಳಿಗೆ ಕಷ್ಟವಾಗುತ್ತಿದೆ ಎಂದು ರಕ್ಷಣಾ ಸಚಿವೆ ನಿರ್ಮಲ ಸೀತಾರಾಮನ್ ಹೇಳಿದ್ದಾರೆ. ರಾಜಧಾನಿ ದೆಹಲಿಯಲ್ಲಿ ನಿನ್ನೆ ಸಮಾರಂಭವೊಂದರಲ್ಲಿ ಮಾತನಾಡಿದ ಅವರು. ಅತ್ಯಾಚಾರಕ್ಕೂ ಮಹಿಳೆಯರ ವಸ್ತ್ರಗಳಿಗೂ ಸಂಬಂಧವಿದೆ ಎಂಬ ಬಗ್ಗೆ ಸಾಮಾನ್ಯವಾಗಿ ಕೇಳಿಬರುತ್ತಿರುವ ಹೇಳಿಕೆಗಳನ್ನು ತಳ್ಳಿ ಹಾಕಿದರು.

ಮಹಿಳೆಯರ ಮೇಲೆ ನಡೆಯುತ್ತಿರುವ ಹಿಂಸಾಚಾರ ಮತ್ತು ಅಪರಾಧಗಳನ್ನು ತಡೆಗಟ್ಟಲು ಸರ್ಕಾರಿ ಸಂಸ್ಥೆಗಳು ಶಕ್ತಿಮೀರಿ ಶ್ರಮಿಸುತ್ತಿವೆ. ಆದರೆ ಮಹಿಳೆಯ ಸ್ನೇಹಿತರು ಅಥವಾ ಪರಿಚಯಸ್ಥರಿಂದಲೇ ಇಂಥ ಕೃತ್ಯಗಳು ನಡೆದಿರುವ ಅನೇಕ ಉದಾಹಣೆಗಳಿವೆ. ಹೀಗಾಗಿ ಇಂಥ ಪ್ರಕರಣಗಳನ್ನು ತಡೆಗಟ್ಟುವುದು ಕಷ್ಟಸಾಧ್ಯ. ಪರಿಚಯಿಸ್ಥರಿಂದಲೇ ಮಹಿಳೆಯರ ಮೇಲೆ ಇಂಥ ಕೃತ್ಯಗಳು ನಡೆಯುತ್ತಿರುವಾಗ ರಕ್ಷಣೆ ನೀಡುವ ಸಂಸ್ಥೆಗಳು ಇವುಗಳನ್ನು ಏನು ಮಾಡಲು ಸಾಧ್ಯ ಎಂದು ನಿರ್ಮಲಾ ಪ್ರಶ್ನಿಸಿದರು.

ಲೈಂಗಿಕ ದೌರ್ಜನ್ಯ ನಡೆಯುವ ಸಂದರ್ಭದಲ್ಲಿ ಮಹಿಳೆಯರು ಪ್ರಚೋದನಾತ್ಮಕ ವಸ್ತ್ರಗಳನ್ನು ಧರಿಸಿದ್ದೇ ಕಾರಣ ಎಂಬ ಹೇಳಿಕಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು, ವೃದ್ಧೆಯರು ಮತ್ತು ಪುಟ್ಟ ಮಕ್ಕಳ ಮೇಲೂ ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ. ಇವರೂ ಇಂಥ ವಸ್ತ್ರಗಳನ್ನು ಧರಿಸಿರುತ್ತಾರೆಯೇ ಎಂದು ರಕ್ಷಣಾ ಸಚಿವರು ಪ್ರಶ್ನೆ ಮಾಡಿದರು.

Facebook Comments

Sri Raghav

Admin