ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಲು ಧ್ಯಾನ ಮಾಡಿ

ಈ ಸುದ್ದಿಯನ್ನು ಶೇರ್ ಮಾಡಿ

yoga

ಇಂದಿನ ಜನ ದೀರ್ಘಕಾಲ ಬದುಕುತ್ತಿದ್ದರೂ ಅವರ ಆರೋಗ್ಯದ ಗುಣಮಟ್ಟ, ಮಾನಸಿಕ ಆರೋಗ್ಯ ಕುಂಠಿತವಾಗಿದೆ ಎಂದು ಇತ್ತೀಚಿನ ಅಧ್ಯಯನಗಳು ತಿಳಿಸಿವೆ.
ಚೀನಾ, ಜಪಾನ್ ಮತ್ತು ಅಮೆರಿಕಾದ ಮಂದಿ ವಾರಕ್ಕೆ ಕ್ರಮವಾಗಿ 48, 46, 45 ಗಂಟೆಗಳ ಕಾಲ ಕೆಲಸ ಮಾಡಿದರೆ ಭಾರತೀಯರು ವಾರಕ್ಕೆ ಸರಾಸರಿ 52 ಗಂಟೆ ಕೆಲಸ ಮಾಡುತ್ತಾರೆ ಎಂದು 2016ರಲ್ಲಿ ವರದಿಯಾಗಿದೆ. ಇದರಿಂದ ನಮಗೆ ಆಯಾಸ ಹೆಚ್ಚಿದೆ ಎಂದು ಭಾರತೀಯರು ಹೇಳಿಕೊಂಡಿದ್ದಾರೆ.

ದೀರ್ಘಕಾಲದ ಕೆಲಸ, ಕೆಲಸ ಮುಗಿಸುವ ಅಂತಿಮ ಗಡುವು, ಮಾಲಿನ್ಯ, ಕೌಟುಂಬಿಕ ಸಂಬಂಧಗಳ ಸಮಸ್ಯೆಗಳು ಒತ್ತಡವನ್ನು ಸೃಷ್ಟಿಸುತ್ತವೆ. ಇದರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕುಂಠಿತಗೊಳ್ಳುತ್ತದೆ. ಮಾನಸಿಕ ಅಸ್ವಸ್ಥತೆ ಕುರಿತಾದ ಜಾಗತಿಕ ವರದಿ ಶೇ.7.5 ಭಾರತೀಯರು ಆತಂಕ ಮತ್ತು ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ವರದಿ ಮಾಡಿದೆ.

ನಮ್ಮಲ್ಲಿ ಬಹುತೇಕರಿಗೆ ನಮ್ಮ ಮನಸ್ಸು ಹಾಗೂ ಭಾವನೆಗಳನ್ನು ಹೇಗೆ ನಿಯಂತ್ರಿಸಬೇಕು ಎಂದು ತಿಳಿದಿಲ್ಲ. ಇತ್ತೀಚಿನ ಕೆಲ ವರ್ಷಗಳಲ್ಲಿ ಮಾನಸಿಕ ಆರೋಗ್ಯ ಸುಧಾರಿಸಿ ಭಾವನಾತ್ಮಕ ಮತ್ತು ಒತ್ತಡದ ಸನ್ನಿವೇಶ ಎದುರಿಸಲು ಧ್ಯಾನ ಪರಿಣಾಮಕಾರಿ ಸಾಧನ ಎಂದು ಜಗತ್ತು ಕಂಡುಕೊಂಡಿದೆ. ಕಲಿಯಲು ಸುಲಭವಾದ ಯೋಗ ನಮ್ಮ ಜೀವನದ ಮೇಲೆ ಎಲ್ಲ ರೀತಿಯಿಂದಲೂ ಹಲವಾರು ಪ್ರಯೋಜನಗಳನ್ನು ಮಾಡುತ್ತಿದೆ. ಧ್ಯಾನವು ನಮ್ಮ ಮೆದುಳಿನ ಒಳ ಪ್ರವೇಶಿಸಿ ಆಳವಾದ ಚಿಂತನೆ ಮತ್ತು ಗ್ರಹಿಕೆಗೆ ಅವಕಾಶ ಮಾಡಿಕೊಡುತ್ತದೆ. ನಾವು ಸೃಜನಶೀಲರಾಗಿರಲು ನೆರವಾಗುತ್ತದೆ, ಎಚ್ಚರಿಕೆ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಧ್ಯಾನದಿಂದ ನಾವು ಸದಾ ಜಾಗೃತರಾಗಿ, ತೀಕ್ಷ್ಣರಾಗಿ, ಹೆಚ್ಚಿನ ಸ್ಮರಣ ಶಕ್ತಿಯನ್ನು ಹೊಂದುತ್ತೇವೆ. ಧ್ಯಾನ ಮಾಡುವ 50 ವರ್ಷ ವಯಸ್ಸಿನ ಮೆದುಳು 25 ವರ್ಷ ವಯಸ್ಸಿನಷ್ಟು ಯೌವನದಿಂದ ಕೂಡಿರುತ್ತದೆ. ಆಲ್ಝೆ ೈಮರ್ ಮತ್ತು ಪಾರ್ಕಿನ್‍ಸನ್ ರೋಗಗಳ ಚಿಕಿತ್ಸೆಯಾಗಿ ಧ್ಯಾನವನ್ನು ಅನ್ವೇಷಿಸುತ್ತಿದ್ದಾರೆ.

yoga-3

ಪ್ರಸ್ತುತ ಜೀವನ ಶೈಲಿಯೊಂದಿಗೆ ನಿದ್ದೆ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದ ನಮ್ಮ ಮೆದುಳು ನಿಧಾನ ಗತಿಯಲ್ಲಿ ಕೆಲಸ ನಿರ್ವಹಿಸುತ್ತದೆ. ಹೀಗಾಗಿ ಮಾನಸಿಕ ಕಿರಿಕಿರಿ, ದುರ್ಬಲ ರಕ್ಷಾಗುಣ, ತೂಕ ಹೆಚ್ಚುವುದು, ಹೃದಯಾಘಾತ ಮತ್ತು ಮಧುಮೇಹದ ಅಪಾಯಗಳನ್ನು ತಂದೊಡ್ಡುತ್ತದೆ. ಪ್ರತಿದಿನ 6 ರಿಂದ 8 ಗಂಟೆಗಳ ಕಾಲ ನಿದ್ರಿಸದೆ ಹೋದಲ್ಲಿ ಸಾವಿನ ಅಪಾಯ ಶೇ.12ರಷ್ಟು ಹೆಚ್ಚು ಎಂದು 16 ಅಧ್ಯಯನಗಳು ತಿಳಿಸಿವೆ.

ಧ್ಯಾನಕ್ಕೂ ಉತ್ತಮ ನಿದ್ರೆಗೂ ಅವಿನಾಭಾವ ಸಂಬಂಧವಿದೆ. ದಿನನಿತ್ಯ ಧ್ಯಾನ ಮಾಡುವವರು ಉತ್ತಮ ನಿದ್ರೆ ಮಾಡುತ್ತಾರೆ ಎಂಬುದನ್ನು ಹಲವಾರು ಸಂಶೋಧನೆಗಳು ತೋರಿಸಿವೆ. ಎಸ್‍ಎಸ್‍ಐಎಆರ್ ನಡೆಸಿದ ಸಹಜ್ ಸಮಾಧಿ ಧ್ಯಾನದ ಆಂತರಿಕ ಪ್ರಾಯೋಗಿಕ ಅಧ್ಯಯನ, ಪ್ರತಿದಿನ ಧ್ಯಾನ ಆರಂಭಿಸಿದ ಒಂದು ವಾರದೊಳಗೆ ಒಂದು ಗಂಟೆ ಹೊತ್ತು ಹೆಚ್ಚು ನಿದ್ದೆ ಮಾಡಬಹುದು ಎಂದು ಹೇಳಿದೆ. ಹೀಗೆ ನಿದ್ರೆಯ ಗುಣಮಟ್ಟ ಸುಧಾರಿಸಿದರೆ ಜನ ನಿದ್ದೆ ಯ ಔಷಧಿಗಳನ್ನು ತೆಗೆದುಕೊಳ್ಳುವುದು ಕಡಿಮೆಯಾಗಬಹುದು. ಧ್ಯಾನದ ಪರಿಣಾಮ ನಾವು ಯೋಚಿಸಿದ್ದಕ್ಕಿಂತ ಹೆಚ್ಚು ಗಾಢವಾಗಿದೆ. ನಮ್ಮ ಮನಸ್ಸು ಮತ್ತು ನಡವಳಿಕೆಯನ್ನು ಇದು ಪ್ರಭಾವಿಸುತ್ತದೆ ಮಾತ್ರವಲ್ಲ ನಮ್ಮಲ್ಲಿ ಸಂತೋಷ, ಏಕಾಗ್ರತೆ ಹಾಗೂ ಅರಿವು ಹೆಚ್ಚಿಸುತ್ತದೆ. ನಮ್ಮ ಡಿಎನ್‍ಎಯನ್ನೂ ಬದಲಾಯಿಸುತ್ತದೆ.

yoga-12

ಧ್ಯಾನ ಎಂಬುದು ಐಷಾರಾಮಿ ಬದುಕಿನ ಭಾಗವಲ್ಲ, ಅದೊಂದು ಜೀವನ. ಆರೋಗ್ಯ, ಸಂತೋಷ ಹಾಗೂ ತಾಳ್ಮೆಯ ಜೀವನಕ್ಕಾಗಿ ಧ್ಯಾನ ಮಾಡಿ. ನಿಮ್ಮನ್ನು ಚೆನ್ನಾಗಿಟ್ಟುಕೊಳ್ಳಲು ಸ್ವಲ್ಪ ಸಮಯ ಕೊಡಿ, ಅನುವಂಶಿಕತೆಯಿಂದ ಆಧ್ಯಾತ್ಮದತ್ತ ಬದಲಾಯಿಸಿಕೊಳ್ಳಿ ಎಂದು ಆರ್ಟ್ ಆಫ್ ಲೀವಿಂಗ್ ಫೌಂಡೇಷನ್‍ನ ಮಹಿಳಾ ಸಬಲೀಕರಣ ಮತ್ತು ಮಕ್ಕಳ ಕಲ್ಯಾಣ ಕಾರ್ಯಕ್ರಮಗಳ ನಿರ್ದೇಶಕಿ ಭಾನುಮತಿ ನರಸಿಂಹನ್ ಹೇಳುತ್ತಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin