ಸಪ್ತಗಿರಿಗೌಡ ಜೊತೆಗೆ ಹೆಜ್ಜೆ ಹಾಕಿದ ಡೂಪ್ಲಿಕೇಟ್ ಅಮಿತ್ ಷಾ – ಮೋದಿ…!

ಈ ಸುದ್ದಿಯನ್ನು ಶೇರ್ ಮಾಡಿ

Modi-Amit
ಬೆಂಗಳೂರು, ಮೇ 8- ಗಾಂಧಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಪ್ತಗಿರಿ ರಾಮಚಂದ್ರಗೌಡ ಅವರ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಪಾದಯಾತ್ರೆ ನಡೆಸಿದರು. ಇದು ಆಶ್ಚರ್ಯವಲ್ಲ. ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರ ಪ್ರತಿರೂಪ ಧರಿಸಿದ ಬಿಜೆಪಿ ಕಾರ್ಯಕರ್ತರಿಬ್ಬರು ಅವರದ್ದೇ ಆವಭಾವದಲ್ಲಿ ಬಿಜೆಪಿ ಅಭ್ಯರ್ಥಿ ಸಪ್ತಗಿರಿಗೌಡರ ಜೊತೆಯಲ್ಲಿ ಹೆಜ್ಜೆ ಹಾಕಿದರು. ಇದನ್ನು ಸಾರ್ವಜನಿಕರು ಹತ್ತಿರ ಬಂದು ಅವರಿಗೆ ಶುಭ ಹಾರೈಸುತ್ತಿದರು.

ಹೋಗುತ್ತಿದ್ದಲ್ಲೆಲ್ಲಾ ಜನರು ಸೆಲ್ಫಿ ತಗೆಸಿಕೊಳ್ಲಲು ಮುಗಿಬಿಳುತ್ತಿದ್ದರು. ಅಲ್ಲದೆ ಬಿಜೆಪಿ ಅಭ್ಯರ್ಥಿ ಸಪ್ತಗಿರಿ ರಾಮಚಂದ್ರಗೌಡರ ಜೊತೆ ಕ್ಷೇತ್ರದ ಸಮಸ್ಯೆಗಳನ್ನು ಹಂಚಿಕೊಳ್ಳುತ್ತಿದ್ದರು. ಇದೇ ವೇಳೆ ಮಾತನಾಡಿದ ಸಪ್ತಗಿರಿ ರಾಮಚಂದ್ರಗೌಡ ಅವರು, ಕ್ಷೇತ್ರದಲ್ಲಿ ಉತ್ತಮ ಬೆಂಬಲ ಸಿಗುತ್ತಿದೆ. ಯುವ ಪಡೆ ನನ್ನ ಉತ್ಸಹಾವನ್ನು ಇಮ್ಮಡಿಗೊಳಿಸಿದೆ. ಮನೆಗೆ ಮನೆಗೆ ಭೇಟಿ ನೀಡಿ ಮತಯಾಚಿಸುವ ವೇಳೆ ಜನರ ಸ್ಪಂದಿಸುವ ರೀತಿ ನನಗೆ ಸಂತಷಗೊಳಿಸುತ್ತಿದೆ. ಈ ಬಾರಿ ಕ್ಷೇತ್ರದ ಜನ ಬದಲಾವಣೆ ಬಯಸಿ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು. ಸ್ವಚ್ಛ ಮತ್ತು ಸುರಕ್ಷಿತ ಗಾಂಧೀನಗರಕ್ಕಾಗಿ ಬಿಜೆಪಿಯನ್ನು ಬೆಂಬಲಿಸುವಂತೆ ಅವರು ಮನವಿ ಮಾಡಿದರು.

Facebook Comments

Sri Raghav

Admin